ಚಿಕುಂಗುನ್ಯಾ ರೋಗಕ್ಕೆ 'ಬದಲಿ ಚಿಕಿತ್ಸೆ': ಸುಳ್ಳುಗಳು ಮತ್ತು ಪೊಳ್ಳು ಆಧಾರಗಳು
ಚಿಕುಂಗುನ್ಯಾ ರೋಗಕ್ಕೆ 'ಬದಲಿ ಚಿಕಿತ್ಸೆ': ಸುಳ್ಳುಗಳು ಮತ್ತು ಪೊಳ್ಳು ಆಧಾರಗಳು
ಆರೋಗ್ಯ ಸಂಪದದಲ್ಲಿ
ಇತ್ತೀಚೆಗೆ ರಾಜ್ಯದಲ್ಲಿ ಚಿಕುಂಗುನ್ಯಾ ರೋಗವು ಹರಡಿದ ಸಂದರ್ಭದಲ್ಲಿ, ರೋಗ ನಿಯಂತ್ರಣಕ್ಕಾಗಿ ಹೋಮಿಯೋಪತಿ ಔಷಧಗಳನ್ನು ವಿತರಿಸುವ ಶಿಬಿರಗಳನ್ನು ಆರೋಗ್ಯ ಇಲಾಖೆಯ ವತಿಯಿಂದ ಎಲ್ಲೆಡೆಗಳಲ್ಲೂ ನಡೆಸಲಾಯಿತು. ಸರಕಾರದ ಈ ನಿರ್ಧಾರಕ್ಕೆ ವೈಜ್ಞಾನಿಕ ಆಧಾರಗಳೇನೆಂದು ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ರಾಜ್ಯ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ನಿರ್ದೇಶನಾಲಯದ ಮಾಹಿತಿ ಅಧಿಕಾರಿಗಳಿಂದ ಮಾಹಿತಿ ಕಾಯಿದೆ, 2005ರಡಿಯಲ್ಲಿ ಮಾಹಿತಿಯನ್ನು ಕೋರಲಾಯಿತು. ಒಂದೆಡೆ, ಹೋಮಿಯೋಪತಿ ಔಷಧಗಳನ್ನು ವಿತರಿಸಿದ ಬಗ್ಗೆ ತಮಗೇನೂ ತಿಳಿದಿಲ್ಲವೆಂದು ದ.ಕ. ಜಿಲ್ಲಾ ಆರೋಗ್ಯಾಧಿಕಾರಿಗಳು ಹೇಳಿದರೆ, ಇನ್ನೊಂದೆಡೆ, ಸಮಗ್ರ ಚಿಕಿತ್ಸಾ ಶಿಬಿರಗಳನ್ನು ಏರ್ಪಡಿಸುವುದಕ್ಕೆ ಹಾಗೂ ಆಯುರ್ವೇದ ಮತ್ತು ಹೋಮಿಯೋಪತಿ ಔಷಧಗಳನ್ನು ಖರೀದಿಸುವುದಕ್ಕೆ ರೂ. 8 ಲಕ್ಷದ ಅನುದಾನವನ್ನು ಕೋರಿ ರಾಜ್ಯ ಸರಕಾರಕ್ಕೆ ಅವರು ಬರೆದಿರುವ ಪತ್ರ ಹಾಗೂ ಅದಕ್ಕುತ್ತರವಾಗಿ ರೂ.7 ಲಕ್ಷದಷ್ಟು ಹಣವನ್ನು ಬಿಡುಗಡೆಗೊಳಿಸಿದ ಬಗೆಗಿನ ಪತ್ರಗಳನ್ನು ರಾಜ್ಯ ಆರೋಗ್ಯ ಇಲಾಖೆಯು ಒದಗಿಸಿದೆ. ಚಿಕುಂಗುನ್ಯಾ ಚಿಕಿತ್ಸೆಯಲ್ಲಿ ಹೋಮಿಯೋಪತಿ ಔಷಧಗಳ ಬಳಕೆಗೆ ಸಾಕಷ್ಟು ವೈಜ್ಞಾನಿಕ ಆಧಾರಗಳಿವೆಯೆಂದು ರಾಜ್ಯ ಆರೋಗ್ಯ ಹಾಗೂ ಕು.ಕ. ನಿರ್ದೇಶನಾಲಯದ ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರಾದರೂ, ಆ ‘ಆಧಾರಗಳನ್ನು’ ವಿಶ್ಲೇಷಿಸಿದಾಗ ಅವು ಎಷ್ಟೊಂದು ಪೊಳ್ಳು ಎನ್ನುವುದು ಸ್ಪಷ್ಟವಾಗುತ್ತದೆ. ಒಟ್ಟಿನಲ್ಲಿ, ಚಿಕುಂಗುನ್ಯಾ ರೋಗದ ಚಿಕಿತ್ಸೆ ಮತ್ತು ನಿಯಂತ್ರಣಕ್ಕಾಗಿ ಲಕ್ಷಗಟ್ಟಲೆ ಜನರಿಗೆ ಹೋಮಿಯೋಪತಿ ಔಷಧಗಳನ್ನು ವಿತರಿಸಿದ ಆರೋಗ್ಯ ಇಲಾಖೆಯ ಕ್ರಮವು ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ.
ವಿವರಗಳು ಇಲ್ಲಿವೆ
- 2343 reads

Comments
Post new comment