There are currently 0 users and 3 guests online.

ನೀವೂ ಪ್ರಕಟಿಸಬಹುದು!

ಆರೋಗ್ಯ ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ಮಧುಮೇಹವೆಂಬ ಗುಪ್ತಗಾಮಿನಿ.....೪

ಮಧುಮೇಹವೆಂಬ ಗುಪ್ತಗಾಮಿನಿ.....೪

ಆರೋಗ್ಯ ಸಂಪದದಲ್ಲಿ

ಸಾಮಾನ್ಯವಾಗಿ ಎಫ್.ಬಿ.ಎಸ್. ಒಬ್ಬ ವ್ಯಕ್ತಿಯ ರಕ್ತದಲ್ಲಿನ ಸಕ್ಕರೆಯ ಕನಿಷ್ಠ ಮಟ್ಟವಾಗಿರುತ್ತದೆ ಮತ್ತು ಪಿ.ಪಿ.ಬಿ.ಎಸ್. ಗರಿಷ್ಠ ಮಟ್ಟವಾಗಿರುತ್ತದೆ. ಹಾಗಾಗಿ, ಎಫ್.ಬಿ.ಎಸ್.
ಪಿ.ಪಿ.ಬಿ.ಎಸ್ ಗಿಂತಲೂ ಕಡಿಮೆಯಿರಲೇ ಬೇಕು. ಆದರೆ ಅಪರೂಪವಾಗಿ ಕೆಲವು ಮಧುಮೇಹಿಗಳು ಮತ್ತು ಆರೋಗ್ಯವಂತರ ರಕ್ತದಲ್ಲಿ ಹಾಗಿರದೇ, ಎಫ್.ಬಿ.ಎಸ್.
ಪಿ.ಪಿ.ಬಿ.ಎಸ್. ಗಿಂತಲೂ ಅಧಿಕವಾಗಿರಬಹುದು. ಇದಕ್ಕೆ ಕಾರಣ ಮೇದೋಜೀರಕಾಂಗದಲ್ಲಿರುವ ಬೀಟಾ ಸೆಲ್ ಗಳಲ್ಲಿರಬಹುದಾದ ಒಂದು ಪುಟ್ಟ ದೋಷ.

೦೧.ಈಗಾಗಲೇ ಹೇಳಿದ ಬೇಸಲ್ ಇನ್ಸುಲಿನ್ ಸ್ರವಿಕೆ ದಿನವೆಲ್ಲಾ ಒಂದೇ ರೀತಿಯಾಗಿರುವುದಿಲ್ಲ. ರಾತ್ರಿ ಹೊತ್ತು ಇದು ಸ್ವಲ್ಪ ಕಡಿಮೆ ಇರುತ್ತದೆ. ಕೆಲವು ವ್ಯಕ್ತಿಗಳಲ್ಲಿ ಬೇಸಲ್ ಇನ್ಸುಲಿನ್ ರಾತ್ರಿ ಹೊತ್ತಿನಲ್ಲಿ ಬಹಳಷ್ಟು ಕಡಿಮೆ ಸ್ರವಿಕೆಯಾಗುತ್ತಿದ್ದರೆ, ಅಂತಹ ವ್ಯಕ್ತಿಗಳಲ್ಲಿ, ಎಫ್. ಬಿ.ಎಸ್. ಹೆಚ್ಚಾಗಿರುವ ಸಾಧ್ಯತೆ ಇರುತ್ತದೆ.
೦೨. ಅಥವಾ ಇನ್ಸುಲಿನ್ ಹಾರ್ಮೋನ್ ಗೆ ವಿರುದ್ಧವಾಗಿ ಕೆಲಸ ಮಾಡುವ ಗ್ಲುಕೋಗಾನ್ , ಗ್ರೋತ್ ಹಾರ್ಮೋನ್ ಗಳ ಸ್ರವಿಕೆ ಬೆಳಗಿನ ಹೊತ್ತು ಸ್ವಲ್ಪ ಜಾಸ್ತಿಯಾಗಿಯೇ ಇದ್ದಲ್ಲಿ
ಇವುಗಳ ಪ್ರಭಾವದಿಂದ ಯಕೃತ್ತಿನಲ್ಲಿ ಗ್ಲೈಕೊಜೆನ್ ರೂಪದಲ್ಲಿ ಸಂಗ್ರಹವಾದ ಗ್ಲುಕೋಸ್ ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆಗೊಂಡು ರಕ್ತಕ್ಕೆ ಸೇರಿ ರಕ್ತದಲ್ಲಿನ ಸಕ್ಕರೆಯ ಅಂಶವನ್ನು
ಹೆಚ್ಚಿಸಬಹುದು.

ಗ್ಲೈಸೀಮಿಕ್ ಇಂಡೆಕ್ಸ್.:

ಮಧುಮೇಹದ ಸಂದರ್ಭದಲ್ಲಿ ಆಹಾರವಸ್ತುಗಳ ಬಗ್ಗೆ ಚರ್ಚೆ ಮಾಡುವಾಗ ಗ್ಲೈಸೀಮಿಕ್ ಇಂಡೆಕ್ಸ್ ಎಂಬ ಒಂದು ವಿಚಾರವನ್ನು ಕಾಣುತ್ತೇವೆ.
ನಾನಾಗಲೇ ಹೇಳಿದಂತೆ, ನಾವು ಯಾವುದೇ ಬಗೆಯ ಆಹಾರವನ್ನು ಸೇವಿಸಿದರೂ ಅದು ಕೊನೆಗೆ ಗ್ಲುಕೋಸ್ ಗೆ ಪರಿವರ್ತಿತವಾಗಿಯೇ ರಕ್ತಕ್ಕೆ ಸೇರುತ್ತದೆ.
ಒಂದೇ ಪ್ರಮಾಣದ ಬೇರೆ ಬೇರೆ ಆಹಾರ ಪದಾರ್ಥಗಳನ್ನು ಸೇವಿಸಿದಾಗ, ರಕ್ತದಲ್ಲಿ ಹೆಚ್ಚುವ ಸಕ್ಕರೆಯ ಪ್ರಮಾಣದಲ್ಲಿ ವ್ಯತ್ಯಾಸವಿರುತ್ತದೆ.
ಉದಾಹರಣೆಗೆ, ಸೊಪ್ಪಿನ ತರಕಾರಿಯಿಂದ ಮಾಡಿದ ಒಂದು ಪದಾರ್ಥವನ್ನು ೧೦೦ ಗ್ರಾಮ್ ಪ್ರಮಾಣದಲ್ಲಿ ಒಬ್ಬ ವ್ಯಕ್ತಿ ಸೇವಿಸಿದ ಮೇಲೆ, ಅವನ ರಕ್ತದಲ್ಲಿ ಸಕ್ಕರೆಯ
ಪ್ರಮಾಣ ಎಷ್ಟು ಹೆಚ್ಚಾಯಿತು ಮತ್ತು ಎಷ್ತು ಹೊತ್ತು ಹೆಚ್ಚಾಗಿಯೇ ಇತ್ತು ಎಂದೇನಾದರೂ ಗಮನಿಸಿದಲ್ಲಿ, ಸೊಪ್ಪಿನ ಪದಾರ್ಥವನ್ನು ಸೇವಿಸಿದ ಬಳಿಕ ಅದು ಬಹಳ
ಕನಿಷ್ಠ ಪ್ರಮಾಣದಲ್ಲಿರುತ್ತದೆ. ಅದರ ಬದಲು ೧೦೦ ಗ್ರಾಮ್ ಖರ್ಜೂರವನ್ನು ತಿಂದನಂತರ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಅಳೆದಾಗ, ಗಮನಾರ್ಹ ಪ್ರಮಾಣದಲ್ಲಿ
ಸಕ್ಕರೆಯ ಅಂಶ ಹೆಚ್ಚಾಗಿರುತ್ತದೆ. ಸೊಪ್ಪಿನ ಗ್ಲೈಸೀಮಿಕ್ ಇಂಡೆಕ್ಸ್ ಅತಿ ಕನಿಷ್ಠವೆಂದೂ , ಖರ್ಜೂರದ ಗ್ಲೈಸೀಮಿಕ್ ಇಂಡೆಕ್ಸ್ ಅತಿ ಗರಿಷ್ಠ ಮಟ್ಟದ್ದೆಂದೂ ತಿಳಿಯುತ್ತೇವೆ.
ಖರ್ಜೂರದ ಜಿ.ಐ.(ಗ್ಲೈಸೀಮಿಕ್ ಇಂಡೆಕ್ಸ್) ಸಕ್ಕರೆಗಿಂತಲೂ ಹೆಚ್ಚು.
ಯಾವುದೇ ಆಹಾರ ವಸ್ತುವಿನ ಜಿ.ಐ. ನ್ನು ಸೂಚಿಸುವಾಗ ಅಂಕೆಗಳಲ್ಲಿ ಹೇಳುತ್ತೇವೆ. ಸಕ್ಕರೆಯ ಜಿ.ಐ. ನ್ನು ೧೦೦ ಎಂದು ಪರಿಗಣಿಸಿ, ಇನ್ನುಳಿದ ಆಹಾರ ಪದಾರ್ಥಗಳ
ಜಿ.ಐ.ನ್ನು ಅದಕ್ಕೆ ತುಲನೆ ಮಾಡಿ ಹೇಳುತ್ತೇವೆ.
ಖರ್ಜೂರದ ಜಿ.ಐ. ೧೦೩, ಎಂದರೆ, ಇದರ ಜಿ.ಸಿ. ಸಕ್ಕರೆಯ ಜಿ.ಐ. ಗಿಂತಲೂ ಶೇ ೩ (3.0%) ಹೆಚ್ಚು ಎಂದರ್ಥ.
ಸೊಪ್ಪಿನ ಪದಾರ್ಥದ ಜಿ.ಸಿ. ೨೦ ಎಂದು ಪರಿಗಣಿಸಿದಾಗ, ಇದು ಸಕ್ಕರೆಯ ಜಿ.ಐ. ಗಿಂತಲೂ ಶೇ ೮೦ (80%) ಕಡಿಮೆ ಎಂದರ್ಥ.

ಆಹಾರ ವಸ್ತುಗಳ ಜಿ. ಐ. ನ್ನು ಅಳೆಯುವ ಅವಶ್ಯಕತೆಯೇನು ?
ಆರೋಗ್ಯವಂತರಿಗೆ ಇದರಿಂದ ಹೆಚ್ಚಿನ ಉಪಯೋಗವಿರದಿದ್ದರೂ, ಮಧುಮೇಹಿಗಳಿಗೆ, ದೇಹದ ತೂಕವನ್ನು ಇಳಿಸಬಯಸುವರಿಗೆ ಇದು ಬಹಳ ಉಪಯುಕ್ತ ಮಾಹಿತಿಯಾಗಿರುತ್ತದೆ.
ಯಾವ ಆಹಾರ ಪದಾರ್ಥದ ಜಿ ಐ. ಹೆಚ್ಚಿದೆ ಯಾವ ಪದಾರ್ಥದ ಜಿ. ಐ. ಕಡಿಮೆಯಿದೆ ಎಂದು ಆ ಪದಾರ್ಥಗಳನ್ನು ಕೇವಲ ನೋಡಿಯಾಗಲೀ, ರುಚಿ ನೋಡಿಯಾಗಲೀ ಹೇಳಲಾಗುವುದಿಲ್ಲ. ಉದಾಹರಣೆಗೆ, ಬಾಯಿಗೆ ಸಪ್ಪೆ ಎನಿಸುವ ಬಿಳೀ ಬ್ರೆಡ್ ಸಿಹಿಸಿಹಿ ಯಾದ ದ್ರಾಕ್ಷಿಗಿಂತಲೂ ಹೆಚ್ಚಿನ ಜಿ.ಐ.ಹೊಂದಿದೆ !
ಸಹಜವಾಗಿಯೇ, ಮಧುಮೇಹಿಗಳು ಹೆಚ್ಚು ಜಿ.ಐ. ಇರುವ ಆಹಾರ ಪದಾರ್ಥಗಳನ್ನು ಕಡಿಮೆ ಪ್ರಮಾಣದಲ್ಲಿ ಬಳಸಬೇಕು.
ಒಂದು ನೆನೆಪಿರಲಿ: ಮಧುಮೇಹಿಗಳಿಗೆ ಯಾವುದೇ ಆಹಾರ ಪದಾರ್ಥ ಸಂಪೂರ್ಣ ನಿಷಿದ್ಧವಲ್ಲ. ಒಂದು ವೇಳೆ ಮಧುಮೇಹಿಯೊಬ್ಬರಿಗೆ ಖರ್ಜೂರವನ್ನು ತಿನ್ನಲೇಬೇಕೆಂಬ ಅಸೆಯಾದಲ್ಲಿ ಯಾವಾಗಲೊಮ್ಮೆ ಮಿತ ಪ್ರಮಾಣದಲ್ಲಿ ಅದನ್ನು ಸೇವಿಸಲು ಅಡ್ದಿ ಇಲ್ಲ. ಆದರೆ ದಿನವೂ ತಿನ್ನಬೇಕೆಂದು ಅಪೇಕ್ಷಿಸುವವರು ಒಂದು ಬಗೆಯ ರಾಜಿ ಮಾಡಿಕೊಳ್ಳಬೇಕು.
ಒಂದು ಖರ್ಜೂರ ತಿಂದ ದಿನ ಅಂದಿನ ಒಟ್ಟು ಆಹಾರದಲ್ಲಿ ಒಂದು ಬಟ್ಟಲು ಅನ್ನವನ್ನೋ, ಅಥವಾ ಒಂದು ಚಪಾತಿಯನ್ನೋ ಕಡಿಮೆ ಮಾಡಿಕೊಳ್ಳಬೇಕು.

ನಾವು ಸಾಮಾನ್ಯವಾಗಿ ಬಳಸುವ ಕೆಲವು ಆಹಾರ ಪದಾರ್ಥಗಳ ಗ್ಲೈಸೀಮಿಕ್ ಇಂಡೆಕ್ಸ್ ಈ ರೀತಿ ಇದೆ :

ಆಹಾರ ಸಾಮಾಗ್ರಿ ಗ್ಲೈಸೀಮಿಕ್ ಇಂಡೆಕ್ಸ್
ಬಹುತೇಕ ಎಲ್ಲಾ ತರಕಾರಿಗಳು ೧೫-೫೦
ಗಜ್ಜರಿ ೬೬
ಆಲೂಗಡ್ಡೆ ೮೧
ಸಿಹಿಗೆಣಸು ೮೫
ಬೀಟ್ ರೂಟ್ ೬೪
ಅನ್ನ ಮತ್ತು ಅಕ್ಕಿಯಿಂದ ತಯಾರಾದ ಪದಾರ್ಥಗಳು ೧೦೦
ಬ್ರೆಡ್ (ಬಿಳಿಯದ್ದು) ೧೦೦
ಬ್ರೆಡ್ (ಕಂದು) ಹೋಲ್ ವ್ಹೀಟ್ ಬ್ರೆಡ್ (whole wheat bread) ೯೫
ಪಪ್ಪಾಯ ೮೩
ಅನಾನಾಸ್ ೮೩
ಬಾಳೆಹಣ್ಣು ೭೩
ಅಂಜೂರ ೯೦
ದ್ರಾಕ್ಷಿ ೬೪
ಸೇಬು ೪೦
ಕಿತ್ತಳೆ ರಸ ೬೪
ಹಾಲು ೪೦
ಜೇನುತುಪ್ಪ ೭೭
ಸಕ್ಕರೆ ೯೫
ಖರ್ಜೂರ ೧೦೩

........... ಮುಂದುವರೆಯುವುದು

326 reads