There are currently 0 users and 0 guests online.

ನೀವೂ ಪ್ರಕಟಿಸಬಹುದು!

ಆರೋಗ್ಯ ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ಸಂಪದ

Syndicate content
Sampada is a community of people passionate about literary activities in Kannada. Sampada is one of the largest Kannada communities on the Internet. ಸಂಪದ ಕನ್ನಡ ನಾಡು, ನುಡಿ, ಓದು ಸುತ್ತ ಆಸಕ್ತಿ ಇಟ್ಟುಕೊಂಡಿರುವವರ ಆನ್ಲೈನ್ ಸಮುದಾಯ ಹಾಗು ಕನ್ನಡದ ಮೊತ್ತ ಮೊದಲ ಆನ್ಲೈನ್ ಸಮುದಾಯಗಳಲ್ಲೊಂದು.
Updated: 3 hours 2 min ago

ಕನ್ನಡೇತರರಿಂದ ಕನ್ನಡದ ಬೆಳವಣಿಗೆಗೆ ಕಾಣಿಕೆ !

3 hours 27 min ago
  ಇಂಗ್ಲೀಶ್ ಭಾಷೆಯನ್ನು ಬ್ರಿಟಿಷರಿಗಿಂತ ಹೆಚ್ಚಾಗಿ ಅಮೆರಿಕನ್ನರೇ ಬೆಳೆಸಿ, ಅಂತರರಾಷ್ಟ್ರೀಯ ಭಾಷೆಯನ್ನಾಗಿ ಮಾಡಿದ್ದು ಎನ್ನಬಹುದು.   ಹಾಗೆಯೇ, ಕನ್ನಡ ಸಾಹಿತ್ಯಕ್ಕೆ ಕೂಡ ಕನ್ನಡೇತರರ ಕೊಡುಗೆ ಸಾಕಷ್ಟಿರುವುದು ಎಲ್ಲರಿಗೂ ಗೊತ್ತಿರುವುದೇ ಆಗಿದೆ.   ಮೊನ್ನೆ ಆನ್ಲೈನ್ ಪತ್ರಿಕೆಗಳತ್ತ ಕಣ್ಣು ಹಾಯಿಸೋಣವೆಂದು ನೋಡಿದರೆ ಒಂದು ಸ್ವಾರಸ್ಯಕರ ಸಂಗತಿ ಗಮನಕ್ಕೆ ಬಂತು.   ಕಸ್ತೂರಿ, ತುಷಾರ  ಮಾಸಿಕಗಳು  ಆನ್ಲೈನ್ ನಲ್ಲಿ ಇಲ್ಲವೇ ಇಲ್ಲ. ತರಂಗ, ಕರ್ಮವೀರ ವಾರಪತ್ರಿಕೆಗಳೂ ಇಲ್ಲ.   ಸುಧಾ, ಮಯೂರಗಳು ಇವೆಯಾದರೂ, ಒಂದು ವರ್ಷಕ್ಕಿಂತ ಹಳೆಯ ಸಂಚಿಕೆಗಳು ಆರ್ಕೈವ್ಸ್ ನಲ್ಲಿ ಲಭ್ಯವಿಲ್ಲ.   ಈ ಪತ್ರಿಕೆಗಳೆಲ್ಲವೂ ಕನ್ನಡಿಗರ ಒ

 

ಮುಂದೆ ಓದಿ...

ಅಹಂಮಿಕೆಯ ಬಿಡು

4 hours 53 sec ago

ದರ್ಪಮೆರೆವಲ್ಲಿ ದಕ್ಷತೆ ತಾ ದಕ್ಕದು
ಮರ್ಯಾದೆ ಎಳ್ಳಷ್ಟೂ ಉಳಿಯದು
ಮನ್ನಣೆ ಎಂದೆಂದೂ ದೊರಕದು
ಅಹಂಮಿಕೆಯ ಬಿಡು-ನನ ಕಂದ ||

 

ಡಿವಿ ಗುಂಡಪ್ಪ ಅವರ 125ನೆಯ ಜನ್ಮದಿನಾಚರಣೆ ಪ್ರಯುಕ್ತ, ಕಗ್ಗ ಸ್ಪರ್ಧೆ

6 hours 48 min ago

ಹಿರಿಯ ಸಾಹಿತಿ ಡಿವಿ ಗುಂಡಪ್ಪ ಅವರ 125ನೆಯ ಜನ್ಮದಿನಾಚರಣೆ ಪ್ರಯುಕ್ತ ಸಮಾಜ ಸೇವಕರ ಸಮಿತಿ, ಬೆಂಗಳೂರು ಇವರು ಐಟಿ ಉದ್ಯೋಗಿಗಳಿಗಾಗಿ ಮಂಕುತಿಮ್ಮನ ಕಗ್ಗ ಕಂಠಪಾಠ ಸ್ಪರ್ಧೆಯನ್ನು ಆಯೋಜಿಸಿದ್ದಾರೆ.

ಬಸವನಗುಡಿಯ 'ಸಮಾಜ ಸೇವಕರ ಸಮಿತಿ' ಯವರು ಪ್ರತಿವರ್ಷದಂತೆ ಈವರ್ಷ ಕೂಡ ಹಿರಿಯ ಸಾಹಿತಿ ಡಿವಿ ಗುಂಡಪ್ಪ ಅವರ ಜನ್ಮದಿನಾಚರಣೆಯನ್ನು ಆಚರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ವಿಚಾರ ಮಂಡನೆ, ನೃತ್ಯ ರೂಪಕ, ಮಂಕುತಿಮ್ಮನ ಕಗ್ಗದ ಆಧಾರಿತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಕಗ್ಗ ಸ್ಪರ್ಧೆಯ ನಿಯಮಗಳು ಹೀಗಿದೆ:
* ತಂಡವೊಂದರಲ್ಲಿ ಕನಿಷ್ಠ ಇಬ್ಬರು ಭಾಗವಹಿಸಬೇಕು, ಗರಿಷ್ಠ ಮೂವರು ಇರಬಹುದು.
* ಮಂಕುತಿಮ್ಮನ ಕಗ್ಗದ ಯಾವುದೇ ಒಂದು ಪದ್ಯವನ್ನು ಪೂರ್ತಿಯಾಗಿ ಹಾಡಬೇಕು.
* ತಂಡವೊಂದಕ್ಕೆ 5 ನಿಮಿಷಗಳ ಸಮಯಾವಕಾಶವಿರುತ್ತದೆ.
* ಅಷ್ಟರಲ್ಲಿ ಅತಿ ಹೆಚ್ಚು ಕಗ್ಗಗಳನ್ನು ಸ್ಮೃತಿಶಕ್ತಿಯಿಂದ ಹಾಡುವ ತಂಡ ಮುಂದಿನ ಸುತ್ತಿಗೆ ಪ್ರವೇಶ ಪಡೆಯುತ್ತದೆ.

 

ಮುಂದೆ ಓದಿ...

ಹವ್ಯಕರ ಹುಡುಗ

8 hours 39 min ago

(ಬ್ರಾಹ್ಮಣರಲೊಂದು ದಲಿತ ಭಾವವನ್ನು ಅರಸುತ್ತಾ...)

ಹವ್ಯಕರ ಹುಡುಗ ನೀನು
ದೇಶ ವಿದೇಶ ಎಂದು ಸುತ್ತಬಾರದು ಮಾಣಿ...
ಶಿವಮೊಗ್ಗ ಸಾಗರಕ್ಕಿಂತ ದೊಡ್ದೂರಿಲ್ಲ,
ಎಂದು ನಂಬಿ, ಹಳ್ಳಿಯಲ್ಲೇ ಇರಬೇಕು


ಹವ್ಯಕರ ಹುಡುಗ ನೀನು
ವಿದ್ಯೆ ಕಲಿತು ಏನಾಗಬೇಕಿದೆ ಮಾಣಿ?
ವ್ಯವಸಾಯ ಮರೆಯಬಾರದು
ಹವ್ಯಕರ ಮುದ್ದಿನ ಮಾಣಿ ನೀನು
ನಿನ್ನಲ್ಲಿ ಮಹತ್ವಾಕಾಂಕ್ಷೆ ಇರಬಾರದು
ಅದಕ್ಕೆಲ್ಲಾ ಬೇರೆ ಜನ ಉಂಟು


ಹವ್ಯಕರ ಹುಡುಗ ನೀನು
ಹೆಣ್ಣು ಸಿಗದೇ ಪರಿತಪಿಸಬಾರದು
ಜಾಸ್ತಿ ಎಂದರೆ...
ನಿನ್ನ ಕೊರಳು ನೀನೆ ಹಿಚುಕು


ಹವ್ಯಕರ ಹುಡುಗ ನೀನು
ಊಟವಿಲ್ಲದ್ದಿದ್ದರೂ ಸರಿ
ತಾಂಬೂಲ ಬಿಡಬಾರದು
ತುಟಿ ಮೇಲೆ ನಗು ಮಾಸಬಾರದು...
 

ಹವ್ಯಕರ ಹುಡುಗ ನೀನು
ಬಂಡೇಳ ಬಾರದು
ಹೆಚ್ಚೆಂದರೆ...
ಮೂಲೆಯಲ್ಲಿ ಕುಳಿತು ಬಿಕ್ಕು...


ಹವ್ಯಕರ ಹುಡುಗ ನೀನು
ಬದುಕೆಲ್ಲ ಸಿಕ್ಕು ಸಿಕ್ಕಾದರು
'ಎಂತ ಇಲ್ಲೇ ಮಾರಾಯ್ತಿ!'
ಎಂದೇಳಿ ನಗಬೇಕು..


ಮರಿಬೇಡ ಮಾರಾಯ

 

ಮುಂದೆ ಓದಿ...

ಸೋಮಾರಿ ಸಂಡೇ ಮೂರ್ತಗೊಂಡ ಬಗೆ..

11 hours 11 min ago

ನೀಲಿ ತುಂಬಿದ ಬಟ್ಟಲು.
ಸಂಡೇ ಎಂಬ ಸೋಮಾರಿಯ ದಿನ ಹಾಗೆ ನೀಲಿ ತುಂಬಿದ ಬಟ್ಟಲಿನಿಂದ ಪ್ರಾರಂಭವಾಗಿದೆ.
ಕ್ರಿಸ್ ಮಸ್ ಮುನ್ನಾದಿನ ಸಂತಾಕ್ಲಾಸ್ ತನ್ನ ಗೋಣಿಚೀಲದಿಂದ ಬಗೆಬಗೆಯ ಆಟಿಕೆಗಳನ್ನು
ನಿಧಾನವಾಗಿ ತೆಗೆದಂತೆ ಪೋರನೊಬ್ಬ ತನ್ನ ಪಾಟಿ ಚೀಲದಿಂದ ಬಗೆಬಗೆಯ ಸಾಮಗ್ರಿಗಳನ್ನು
ಅತೀ ಎಚ್ಚರಿಕೆಯಿಂದ ತೆಗೆಯುತ್ತಿದ್ದಾನೆ.ಜಗದ ಊಹೆಗೆ ನಿಲುಕದ ಯಾವುದೋ ಮಹತ್ತರ
ಕಾರ್ಯವನ್ನು ತಾನೊಬ್ಬನೇ ಸಾಧಿಸುವ ಹಮ್ಮಿನಲ್ಲಿ ಇರುವಂತೆ ತೋರುತ್ತಿದ್ದಾನೆ.
ಆದರೆ ಪೋರನ ಈ ಕಾರ್ಯಕ್ಕೆ ಮನೆಯಲ್ಲಿನ ಜನರ್ಯಾರೂ ಗಮನ ಕೊಟ್ಟಂತಿಲ್ಲ.

ಇಷ್ಟಕ್ಕೂ ಏನೇನು ತೆಗೆಯುತ್ತಿದ್ದಾನೆ ಆತ? ಮೊದಲಿಗೆ ಮಗ್ಗಿ ಪುಸ್ತಕ.ನಂತರ ಭಾಷಾಂತರ ಮಾಲೆ.
ನಿನ್ನೆ ಕೊಂಡ ಹೊಸ ನೋಟಬುಕ್ಕು.ಇದು ನೋಡಿ,ಕೆಲವೇ ದಿನಗಳ ಹಿಂದಷ್ಟೇ ಮೂರು ತೂತುಗಳನ್ನು
ಮಾಡಿ ರಟ್ಟಿನ ಮೇಲೆ ಹೊಲಿಗೆ ಹಾಕಿಸಿಕೊಂಡು ಬೈಂಡಿಂಗ್ ಮಾಡಿಸಿಕೊಂಡಿರುವ ಸರಕಾರಿ
ಪಾಠಪುಸ್ತಕ..
ಅದೋ,ಈಗ ಬರುತ್ತಿದೆ,ಬ್ರಹ್ಮಾಂಡದ ಅದ್ಭುತಗಳನ್ನೆಲ್ಲ ತನ್ನೊಳಗೆ ಬಚ್ಚಿಟ್ಟುಕೊಂಡಿರುವ ಪೆಟ್ಟಿಗೆ!
ಏನೇನಿಲ್ಲ ಅದರಲ್ಲಿ?

 

ಮುಂದೆ ಓದಿ...

ಪ್ರಕೃತಿ ತಯಾರಿಸಿದ ಕಲಾಕೃತಿ

11 hours 49 min ago
IMG_3237.JPG

 ಇದು ನಮ್ಮ ತೋಟದ ತೆಂಗಿನ ಕಾಯಿ. ತೆಂಗಿನ ಮರದ ಕಲೆಗಾರಿಕೆ ಹೇಗಿದೆ?

 

ಕನಸುಗಾರ...

11 hours 55 min ago

ಚಿನ್ನದ ಛಾವಣಿಯ ಮೇಲೆ, ಹುಯ್ದಿದೆ ಮುತ್ತು ರತ್ನಗಳ ಮಳೆ...

ಹರಿದು ನೆಲ ಸೇರಿತದು, ಇಲ್ಲಿ ನಿನ್ನ ನಗುವಿಗೊ೦ದೆ ಬೆಲೆ...

 

ದ೦ತದ ಮನೆಯ೦ಗಳದಲ್ಲಿ, ಕುಳಿತು ಕಾದಿಹ ಚ೦ದ್ರ ಅಳಿಸಿ ತನ್ನ ಕಪ್ಪು ಕಲೆಯ...

ಮಿ೦ಚಾಗಿ ಮೆರೆವ ನಿನ್ನ ಹಿಡಿಯಲು, ಹಾಸಿಹ ನಕ್ಶತ್ರಗಳಲ್ಲಿ ನೇಯ್ದ ಬಲೆಯ...

 

ಇದು ಕನಸಿನ ಲೋಕ ಚೆಲುವೆ...

ಇಲ್ಲಿ ಎಲ್ಲೆಲ್ಲೂ ನೀನೇ ಇರುವೆ...

 

ಆ ಸೂರ್ಯ ವೈರಾಗಿ, ಲೋಕದ ತುದಿಯಲ್ಲಿ ನ೦ದಿಹನು, ಸಿಗದೆ ನಿನ್ನ ಹೊಗಳಲು ಪದಗಳು...

ಈ ಬೆ೦ಕಿ ನಿನ್ನ ಬೈರಾಗಿ, ಶಿಸ್ತಾಗಿ ಕುಳಿತಿಹನು ಈ ಇರುಳಲ್ಲಿ ನಿನ್ನ೦ದವ ಬೆಳಗಲು...

 

ಬೆರಗಾಗಿ ಮತ್ತೆ ಮತ್ತೆ ಬರುತಿರೆ, ನಿನ್ನ ನೋಡಲು ಆ ಸಿಡಿಲು...

 

ಮುಂದೆ ಓದಿ...

ಅ ಕಪ್ ಓಫ್ ಕಾಫಿ ... ಸಿಪ್ - ೪೯

Mon, 02/06/2012 - 10:16

Normal 0 false false false EN-US X-NONE X-NONE

 

ಮುಂದೆ ಓದಿ...

(ಕಥೆ) ನಿಧಿ ‍‍= ವಿಧಿ

Mon, 02/06/2012 - 09:52

ನನ್ನೆದುರಿಗೆ ಸಚಿನ್ ನಿಂತಿದ್ದಾನೆ. ಸಚಿನ್ ಕೈಯಲ್ಲಿ ಮೊನಚಾದ ಆಯುಧ ಒಂದಿದೆ.

 

ಆಯುಧ ರಕ್ತದಲ್ಲಿ ನೆಂದು ಆಯುಧದ ತುದಿಯಿಂದ ರಕ್ತ ತೊಟ್ಟಿಕ್ಕುತ್ತಿದೆ.

 

 

ಮುಂದೆ ಓದಿ...

ಒಂದೆರಡು ಸಾಲಿನ ಒಂದೇ ಕಥೆ

Mon, 02/06/2012 - 06:51

ಶ್ರೀಮಂತನ ಒಬ್ಬನೇ ಮಗನೊಬ್ಬ ಮನೆ ಎದುರಿನ ಗುಡಿಸಲಲ್ಲಿನ ಮಕ್ಕಳ ಬಳಿಯಿದ್ದ ಹಳೇ ಆಟಿಕೆಗಳೊಂದಿಗೆ ಸಂತೋಷವಾಗಿ ಆಡುತ್ತಿದ್ದ. ಇದನ್ನು ನೋಡಿದ ಶ್ರೀಮಂತ ಮಗನಿಗಾಗಿ ಸಾವಿರಾರು ಮೌಲ್ಯದ ಹೊಚ್ಚ ಹೊಸ ಆಟಿಕೆಗಳನ್ನು ತಂದು ಉಡುಗೊರೆಯಾಗಿ ನೀಡಿದ..

ಅವತ್ತಿನ ಸಂಜೆ ಮಗ ಮತ್ತದೇ ಗುಡಿಸಿಲಿನ ಹುಡುಗರ ಜೊತೆ ಹಳೇ ಆಟಿಕೆಗಳೊಡನೆ ಸಂತೋಷವಾಗಿ ಆಡುತ್ತಿದ್ದುದನ್ನು ನೋಡಿ, ಸಂತೋಷ ಅನ್ನೋದು ವಸ್ತುವಿನಲ್ಲಿ ಅಡಗಿಲ್ಲ ಎಂಬ ಸತ್ಯವನ್ನು ತಿಳಿದುಕೊಂಡ..

 

ಕವನ ಶೀರ್ಷಿಕೆ: ಸಾಧ್ಯವಾದೀತೇ????

Mon, 02/06/2012 - 06:45

 ಕೊಟ್ಟ ಮಾತು,
ಕೂಡಿಟ್ಟ ಕನಸುಗಳ ಮರೆತು
ಕನವರಿಸಲಾದೀತೇ?

ಕಾರಣವೇ ಹೇಳದೇ
ನೀ ಬಿಟ್ಟು ಹೋದರೆ,
ನನ್ನಿಂದ ತಡೆದುಕೊಳ್ಳಲಾದೀತೇ

ನಿನ್ನ ಪ್ರೀತಿ ಇಲ್ಲದೇ,
ಪ್ರೀತಿಗೆ ಅರ್ಥ ಹುಡುಕಲು
ನನ್ನಿಂದ ಸಾಧ್ಯವಾದೀತೇ?

ನನ್ನೀ ಬದುಕು ನೀನಿಲ್ಲದೇ ಪೂರ್ಣವಾದೀತೇ?
ನಿನ್ನ ಬಿಟ್ಟು ನನ್ನ ಬದುಕು ಬಂಗಾರವಾದೀತೇ?

ಸಾಧ್ಯವಾದೀತೇ?

 

ಮುಂದೆ ಓದಿ...

ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ

Mon, 02/06/2012 - 01:27
flower images.jpg

 

 

 

 

 ಈ ಜನರೇಕೆ ಹೀಗೆ?

 

ಮಾಡಿದ್ದ ಮರೆಯುವರು ಮಾಡಲಿಲ್ಲೆನ್ನುವರು

ಕೂಡಿ ಬಾಳಿದರೂ ಕೊರತೆಯ ಹುಡುಕುತ

ರೂಢಿಯೊಳು ಕಪಟ ನಾಟಕಗಳನೆ ಮೆಚ್ಚುವರು

ನಾಡಿನೊಳು ಗುಣಕಿಲ್ಲ ಹಣಕಿಹುದು ಬೆಲೆಯು

ತಿಳಿದರೂ ನಮ್ಮವರೆ ನಮ್ಮೆದೆಯ ಸುಡುವರು

ಬಳಲಿಸುತ ಶುದ್ಧಹೃದಯಿಗಳನು

ಕಳವಳದಿ ಬಳಲಿದರು ಬೆನ್ನು ತೋರಿಸಿ ನಡೆದು

ತಿಳಿಮನವ ಕಲಕಿ ತಳಮಳವೀವರು

ನಮಗೇಕೆ ಬಾರದೋ ಒಳಗೊಂದು ಹೊರಗೊಂದು

ನಮಗಿಲ್ಲಿ  ನೇರ ನಡೆ ನುಡಿಯದೇಕೊ?

ಮೋಸ ವಂಚನೆ ಬರದು ಸೋಗಿನಾ ನಡೆ ಬರದು

ದೋಷವಿದು ಕಲಿಯುಗದಿ ನಿಜದ ನಡೆಯು

 

ಇಲ್ಲಿ ನೀ ನಗಬೇಕು ಎದೆ ಕುದಿಯುತಿದ್ದರೂ

ಇಲ್ಲಿ ಧೂರ್ತಗು ಕೈ ಮುಗಿಯಬೇಕು

ಇಲ್ಲಿ ತೋರಿಕೆಯಾಟ ತೋರಲೇ ಬೇಕಲ್ಲ!

ಇಲ್ಲಿ ಸಜ್ಜನಿಕೆಗೆ ಬೆಲೆ ಅತಿವಿರಳವೂ

ನಿನ್ನ ಜೀವನವನ್ನೆ ನೀ ಕೊಟ್ಟರೇನಾಯ್ತು

ನೀನೇನು ಮಾಡಿರುವಿ ಎನ್ನುವವರದೋ!

 

ಮುಂದೆ ಓದಿ...

ಸರಸ್ವತಿ ಶಂಕರ್ ಅವರ ಹೊಸ ಕಾದಂಬರಿಯ ಬಿಡುಗಡೆ

Sun, 02/05/2012 - 23:33

 ಶ್ರೀಮತಿ ಸರಸ್ವತಿ ಶಂಕರ್  ಅವರ ಕಾದಂಬರಿ "ಹೆಣ್ಣು-ಹೊನ್ನು" ಇದರ ಬಿಡುಗಡೆ ಸಮಾರಂಭ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಕೃಷ್ಣರಾಜ ಪರಿಷನ್ಮಂದಿರದಲ್ಲಿ ತಾ.೫-೨-೨೦೧೨ ಭಾನುವಾರ  ನೆರವೇರಿತು.ಬೆಂಗಳೂರು ದೂರದರ್ಶನದ ಸಹಾಯಕ ನಿಲಯ ನಿರ್ದೇಶಕರಾದ ಶ್ರೀ ಸಿ.ಎನ್.ರಾಮಚಂದ್ರ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಕರ್ನಾಟಕ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ  ಡಾ॥ಸಿ.ವೀರಣ್ಣ ಅವರು ಕೃತಿಯನ್ನು ಲೋಕಾರ್ಪಣ ಮಾಡಿದರು.ಮೈಸೂರಿನ ಸಂಗೀತ ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕರಾದ ಡಾ।।ಕಬ್ಬಿನಾಲೆ ವಸನ್ತ ಭಾರದ್ವಾಜ್ ಅವರು ಕೃತಿ ಪರಿಚಯ ಮಾಡಿದರು.ಕೃತಿಯ ಪ್ರಕಾಶಕ ರವಿ ಪ್ರಕಾಶನದ ಶ್ರೀ ಎಸ್.ಆರ್.ಸತ್ಯನಾರಾಯಣ ಅವರು ಸ್ವಾಗತಿಸಿದರು.ಕಾದಂಬರಿಗಾರ್ತಿ ಸರಸ್ವತಿ ಶಂಕರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಪ್ರೊ।।ಎಸ್.ಬಿ.ಸುಳ್ಯ ಅವರು ವಂದಿಸಿದರು. ಶ್ರೀ ಎಸ್.ಎನ್.ಪಂಜಾಜೆ ನಿರೂಪಿಸಿದರು.ಈ ಸಂದರ್ಭದಲ್ಲಿ ಭಾವಗೀತೆಗಳ ಗಾಯನವನ್ನೂ ಆಯೋಜಿಸಲಾಗಿತ್ತು.

 

ಮುಂದೆ ಓದಿ...

ಕಪ್ಪು ಚುಕ್ಕೆ

Sun, 02/05/2012 - 12:05

ಬರೆಯಲು ನಾ ಬರಹಗಾರನಲ್ಲ 

ಕವಿಯಂತು ನಾ ಅಲ್ಲವೇ ಅಲ್ಲ..

ಗೀಚಬೇಕೆಂದಿತು ಮನಸ್ಸು

ಇದು ನನ್ನ ಮೊದಲ ಗೀಚು

ಸಂಪದದಲ್ಲಿ ಕಣ್ಣಿಟ್ಟವರಿಗೆ

 ನನ್ನದೊಂದು "ಕಪ್ಪು ಚುಕ್ಕೆ"

 

ಕ್ಯಾರಿ ರೊಡಿನಿಸ್ಕಿ

Sun, 02/05/2012 - 11:33
22632_221708034901_221696669901_3148402_6986499_n.jpg

ಕ್ಯಾರಿ ಮೊನ್ನೆ ನನ್ನ ಕ್ಯಾಂಪಸ್ನಲ್ಲಿ ಅವಳ ಹಲವು ಜನಪ್ರಿಯ ಕವಿತೆಗಳನ್ನ ಅವಳ ಅತ್ಯ೦ತ ಪ್ರಭಾವಶಾಲಿ ಭಾವಾನಾತ್ಮಕ ದ್ವನಿಯ ಏರಿಳಿತಗಳಿಂದ ನನ್ನ ಮನಕ್ಕೆ ಇಳಿದ ಪರಿಣಾಮ ಅವಳನ್ನ ನಿಮಗೆ ಪರಿಚಯಿಸ ಬೇಕೆ೦ದು ಈ ಬರಹ. ಆಕೆಯ ಕವನಗಳ ತುಲನೆ ಹಾಗೊ ವಿಚಾರಗಳ ವಿಮರ್ಶೆಗೆ ಇಲ್ಲಿ ಇಳಿಯಲಾರೆ, ಅದರೆ ಅವಳ ಹಲವು ವಿಚಾರಗಳು ನಿಜಕ್ಕೊ ನನಗೆ  ಇವೊತ್ತಿನ ಅಗತ್ಯಗಳು ಎನಿಸಿದ್ದು ನಿಜ. ಆಕೆ ಇಡೀ ಅಮೇರಿಕೆಯನ್ನ ಸುತ್ತಿ, ಶಾಲೆ, ಕಾಲೇಜು, ಯುನಿವರ್ಸಿಟಿಗಳಲ್ಲಿ ಅವಳ ಕವನಗಳ ಕಾರ್ಯಕ್ರಮ ಕೊಟ್ಟಿದ್ದಾಳೆ. ಇತ್ತೀಚಿಗೆ ಅಸ್ಟ್ರೇಲಿಯ, ನ್ಯೊಜಿಲ್ಯಾಂಡ್ ಹಾಗೊ ಭಾರತದ ಹಲವು ನಗರಗಳಲ್ಲಿ ಕವನಗಳ ಕಾರ್ಯಕ್ರಮ ಕೊಟ್ಟಿದ್ದಾಳೆ. ಅವಳ ಕೆಲವು ಕವನಗಳ ಲಿಂಕ್ ಇಲ್ಲಿ ಕ್ಲಿಕ್ಕಿಸಿದರೆ ನಿಮಗೆ ಅವಳ ದ್ವನಿಯ ಪ್ರಾಭಾವ ಅರಿವಿಗೆ ಬರುತ್ತೆ 

http://www.youtube.c...

http://fuckyeahslamp...

ಗೊಗಲಿಸಿ ಹೆಚ್ಹಿನ ಮಾಹಿತಿಗೆ ತಡಕಾಡಿದರೆ ಅವಳನ್ನ ಇನ್ನಸ್ಟು ಪರಿಚಯಿಸಿಕೊೞವಬಹುದು.

 

ಮುಂದೆ ಓದಿ...