ನ್ಯುಮೋನಿಯಾ ಲಸಿಕೆ ಬೇಕೇ?
ನ್ಯುಮೋನಿಯಾ ಲಸಿಕೆ ಬೇಕೇ?
ಆರೋಗ್ಯ ಸಂಪದದಲ್ಲಿ

ನ್ಯುಮೋನಿಯಾದಿಂದ ನಮ್ಮ ಮಕ್ಕಳನ್ನು 'ರಕ್ಷಿಸುವ' ಅಭಿಯಾನಕ್ಕೀಗ ಚಾಲನೆ ನೀಡಲಾಗಿರುವಂತೆ ಕಾಣುತ್ತಿದೆ. ನ್ಯೂಮೋಕಾಕಸ್ ಬ್ಯಾಕ್ಟೀರಿಯಾದ ಸೋಂಕಿನಿಂದ ಭಾರತದಲ್ಲಿ ಪ್ರತಿ ವರ್ಷವೂ ಲಕ್ಷಗಟ್ಟಲೆ ಮಕ್ಕಳು ಸಾಯುತ್ತಿದ್ದಾರೆಂದೂ, ನಮ್ಮ ಮಕ್ಕಳೆಲ್ಲರನ್ನೂ ರಕ್ಷಿಸಲು ಹೊಚ್ಚ ಹೊಸದಾದ ನ್ಯೂಮೋಕಾಕಸ್ ನಿರೋಧಕ ಲಸಿಕೆಯನ್ನು ನಮ್ಮ ದೇಶದ ಎಲ್ಲಾ ಮಕ್ಕಳಿಗೆ ನೀಡಬೇಕೆಂದೂ, ರೂ. 3500ರಷ್ಟು ವೆಚ್ಚವಾಗುವ ಈ ಲಸಿಕೆಯನ್ನು ಕೇವಲ 30ಸೆಂಟ್ಸ್ (ರೂ 15)ದರದಲ್ಲಿ ಒದಗಿಸುವ ಜಾಗತಿಕ ಲಸಿಕೆ ಮತ್ತು ಪ್ರತಿರಕ್ಷಣಾ ಒಕ್ಕೂಟ(ಜಿಎವಿಐ) ದ ಜೊತೆ ಭಾರತ ಸರಕಾರವು ಈ ಕೂಡಲೇ ಒಪ್ಪಂದವನ್ನು ಮಾಡಿಕೊಳ್ಳಬೇಕೆಂದೂ ನ್ಯೂಮೋಕಾಕಸ್ ರೋಗ ನಿಯಂತ್ರಣಕ್ಕಾಗಿ ಏಷ್ಯಾಮಟ್ಟದ ತಜ್ಞರ ಒಕ್ಕೂಟವೆಂಬ (ಅಸಾಪ್) ಹೆಸರಿನ ಶಿಶುವೈದ್ಯರ ಸಂಘಟನೆಯೊಂದು ಹೇಳಿರುವುದು ಈಗಾಗಲೇ ಪತ್ರಿಕೆಗಳಲ್ಲಿ ವರದಿಯಾಗಿದೆ. [1-4] ಆದರೆ, ಹಲವು ವೈದ್ಯರುಗಳೂ, ಜನಸಾಮಾನ್ಯರೂ ಈ ಬಗ್ಗೆ ಸಹಜವಾಗಿಯೇ ಪ್ರಶ್ನೆಗಳನ್ನೆತ್ತಿದ್ದಾರೆ.
ಇಂದಿಗೆ ಸರಿಯಾಗಿ ಹನ್ನೊಂದು ವರ್ಷಗಳ ಹಿಂದೆ ಇಂತಹದೇ ಇನ್ನೊಂದು ಪ್ರಯತ್ನ ನಡೆದಿದ್ದುದನ್ನು ಇಲ್ಲಿ ನೆನಪಿಸಿಕೊಳ್ಳುವುದು ಅಸಮಂಜಸವೆನಿಸದು. ಆಗ ಹೆಪಟೈಟಿಸ್ ಬಿ ಲಸಿಕೆಯ ಬಗೆಗೂ ಇದೇ ರೀತಿಯ ಪ್ರಚಾರವನ್ನೂ, ಅಲ್ಲಲ್ಲಿ ಲಸಿಕೆ ಹಾಕಿಸುವ ಶಿಬಿರಗಳನ್ನೂ ಆಯೋಜಿಸಲಾಗಿತ್ತು. ಹೆಪಟೈಟಿಸ್ ಬಿ ಸೋಂಕು ಹೆಚ್.ಐ.ವಿ. ಗಿಂತಲೂ ಅತಿ ಭೀಕರವಾಗಿದೆ, ಅದು ಅತಿ ಸುಲಭವಾಗಿ ಹರಡುತ್ತದೆ ಮಾತ್ರವಲ್ಲ, ಶಾಲೆಗಳಲ್ಲಿ ಮಕ್ಕಳು ಆಟವಾಡುವ ವೇಳೆಯಲ್ಲಿಯೂ ಅದು ಹರಡಬಹುದು ಎಂಬಿತ್ಯಾದಿ ಕಾರಣಗಳನ್ನೊಡ್ಡಿ ಎಲ್ಲಾ ವಯಸ್ಸಿನ ಜನರು ಅದನ್ನು ಹಾಕಿಸಿಕೊಳ್ಳುವುದೇ ಸುರಕ್ಷಿತವೆಂದು ಹೆದರಿಸಲಾಯಿತು. ವಿಶ್ವ ಆರೋಗ್ಯ ಸಂಸ್ಥೆಯ ನೀತಿಯೂ ಇದೇ ಆಗಿದೆ ಎಂದೂ ಹೇಳಲಾಯಿತು. ಶಾಲೆಗಳು, ಸೇವಾ ಸಂಸ್ಥೆಗಳು, ಆಸ್ಪತ್ರೆಗಳು, ಹೀಗೆ ಎಲ್ಲೆಂದರಲ್ಲಿ, ‘ಕಡಿಮೆ ದರದಲ್ಲಿ’ ಹೆಪಟೈಟಿಸ್ ಬಿ ನಿರೋಧಕ ಲಸಿಕೆಯನ್ನು ಹಾಕುವ ಶಿಬಿರಗಳನ್ನು ನಡೆಸಲಾಯಿತು. ಆದರೆ ಕೆಲವು ವೈದ್ಯರಿಂದ ವ್ಯಕ್ತಗೊಂಡ ಪ್ರಬಲವಾದ ವಿರೋಧ, ಹೆಪಟೈಟಿಸ್ ಬಿ ಸೋಂಕಿನ ವಿರುದ್ಧವಾಗಿ ಸಾಮೂಹಿಕವಾಗಿ ಲಸಿಕೆಯನ್ನು ನೀಡಬೇಕೆನ್ನುವುದು ತಮ್ಮ ನೀತಿಯಲ್ಲವೆಂದು ವಿಶ್ವ ಆರೋಗ್ಯ ಸಂಸ್ಥೆಯಿಂದ ಬಂದ ಸ್ಪಷ್ಟೀಕರಣ ಹಾಗೂ ಈ ಬಗ್ಗೆ ಹೆಚ್ಚಿದ ಜನಜಾಗೃತಿಗಳೆಲ್ಲದರ ಫಲವಾಗಿ ಇಂತಹಾ ಶಿಬಿರಗಳು ಕೆಲ ವಾರಗಳಲ್ಲೇ ನಿಂತು ಹೋದವು. ಈಗ ಇನ್ನೊಂದು ಹೊಸ ಲಸಿಕೆ ಬಂದಿದೆ, ಇತಿಹಾಸ ಮರುಕಳಿಸುತ್ತಿದೆ.
ಏನಿದು ನ್ಯುಮೋಕಾಕಸ್ ನ್ಯುಮೋನಿಯಾ?
ನ್ಯುಮೋನಿಯಾ ಅಂದರೆ ಶ್ವಾಸಕೋಶದ ಸೋಂಕು. ಅದರಲ್ಲಿ ಹಲವು ವಿಧಗಳು, ಅವಕ್ಕೆ ಹಲವಾರು ಕಾರಣಗಳು. ಭಾರತದಂತಹಾ ಅಭಿವೃದ್ಧಿಶೀಲ ರಾಷ್ಟ್ರಗಳ ಮಕ್ಕಳಲ್ಲಿ ಶೇ. 30ರಷ್ಟು ನ್ಯುಮೋನಿಯಾಗಳಿಗೆ ಅಡುಗೆ ಮನೆಯ ಹೊಗೆಯೇ ಮುಖ್ಯ ಕಾರಣವೆನ್ನುವುದನ್ನು ವಿಶ್ವ ಆರೋಗ್ಯ ಸಂಸ್ಥೆಯ ಅಧ್ಯಯನಗಳು ತೋರಿಸಿವೆ.[5] ಇನ್ನುಳಿದವುಗಳಲ್ಲಿ ಸುಮಾರು ಅರ್ಧದಷ್ಟು ಪ್ರಕರಣಗಳು ವೈರಸ್ ಸೋಂಕಿನಿಂದ ಉಂಟಾದರೆ [6] ಉಳಿದರ್ಧ ಬ್ಯಾಕ್ಟೀರಿಯಾಗಳು, ಮೈಕೋಪ್ಲಾಸ್ಮಾ, ಕ್ಲಮೀಡಿಯಾ ಹಾಗೂ ಪತ್ತೆ ಹಚ್ಚಲಾಗದ ಇತರ ರೋಗಾಣುಗಳಿಂದ ಉಂಟಾಗುತ್ತವೆ.[7,8]
ನ್ಯುಮೋನಿಯಾವನ್ನುಂಟು ಮಾಡುವ ಬ್ಯಾಕ್ಟೀರಿಯಾಗಳಲ್ಲಿಯೂ ಹಿಮೋಫಿಲಸ್, ನ್ಯೂಮೋಕಾಕಸ್, ಸ್ಟಫಲೋಕಾಕಸ್ ಇತ್ಯಾದಿ ಹಲವು ವಿಧಗಳಿವೆ. ನ್ಯೂಮೋಕಾಕಸ್ ಬ್ಯಾಕ್ಟೀರಿಯಾದಲ್ಲೇ 90 ಉಪವಿಧಗಳನ್ನು ಗುರುತಿಸಲಾಗಿದ್ದು ಪ್ರದೇಶ, ರೋಗಿಯ ವಯಸ್ಸು ಇತ್ಯಾದಿಗಳಿಗನುಗುಣವಾಗಿ ಅವು ಬೇರೆ ಬೇರೆ ಅಂಗಗಳ ಸೋಂಕುಗಳನ್ನುಂಟು ಮಾಡುತ್ತವೆ ಮತ್ತು ಅಂತಹಾ ಸೋಂಕುಗಳ ಸ್ವರೂಪವು ಆಗಾಗ ಬದಲಾಗುತ್ತಿರುತ್ತದೆ.[9,10] ಆದ್ದರಿಂದ, ನ್ಯುಮೋನಿಯಾಕ್ಕೆ ಕೇವಲ ನ್ಯೂಮೋಕಾಕಸ್ ಅಷ್ಟೇ ಕಾರಣವಲ್ಲವೆನ್ನುವುದು ಸ್ಪಷ್ಟವಾಗುತ್ತದೆ. ಹೊಸ ನ್ಯುಮೋಕಾಕಸ್ ಲಸಿಕೆಯ ಬಗ್ಗೆ ಒದಗಿಸಲಾಗಿರುವ ಮಾಹಿತಿಯಲ್ಲಿ ಈ ಬಗ್ಗೆ ಹೀಗೆ ಹೇಳಲಾಗಿದೆ: ನ್ಯುಮೋನಿಯಾ ಪ್ರಕರಣಗಳಲ್ಲಿ ಸೋಂಕನ್ನುಂಟು ಮಾಡಿರುವ ಸೂಕ್ಷ್ಮಾಣುವನ್ನು ಗುರುತಿಸುವುದು ಹಲವು ಸಂದರ್ಭಗಳಲ್ಲಿ ಸಾಧ್ಯವಿಲ್ಲದಿರುವುದರಿಂದ, ಮಕ್ಕಳ ನ್ಯುಮೋನಿಯಾದಲ್ಲಿ ನ್ಯುಮೋಕಾಕಸ್ ನ ಪಾಲು ಎಷ್ಟೆನ್ನುವುದು ಸ್ಪಷ್ಟವಾಗಿ ತಿಳಿಯದು. ಲಭ್ಯವಿರುವ ವರದಿಗಳಂತೆ ಮಕ್ಕಳಲ್ಲುಂಟಾಗುವ ನ್ಯುಮೋನಿಯಾ ಪ್ರಕರಣಗಳಲ್ಲಿ ಶೇ.30ರಷ್ಟು ಬ್ಯಾಕ್ಟೀರಿಯಾಗಳ ಸೋಂಕಿನಿಂದ ಉಂಟಾಗುತ್ತವೆ ಹಾಗೂ ಇವುಗಳಲ್ಲಿ ಶೇ. 70ರಷ್ಟು (ಅಂದರೆ ಒಟ್ಟು ಸಮುದಾಯಜನ್ಯ ನ್ಯುಮೋನಿಯಾ ಪ್ರಕರಣಗಳಲ್ಲಿ ಶೇ.21ರಷ್ಟು) ನ್ಯುಮೋಕಾಕಸ್ ನಿಂದ ಉಂಟಾಗುತ್ತವೆ.[11] ಹಾಗಾಗಿ, ಈ ಹೊಸ ಲಸಿಕೆಯನ್ನು ನೀಡಿದರೆ ನ್ಯುಮೋನಿಯಾವನ್ನೇ ಇಲ್ಲದಂತೆ ಮಾಡಲಾಗದು ಎನ್ನುವುದು ಸುಸ್ಪಷ್ಟ.
ನ್ಯುಮೋಕಾಕಸ್ ಲಸಿಕೆಯಲ್ಲಿ ಏನಿದೆ?
ಮಕ್ಕಳಲ್ಲಿ ನ್ಯೂಮೋಕಾಕಸ್ ಸೋಂಕುಗಳನ್ನು ತಡೆಯುವುದಕ್ಕೆಂದೇ ಈಗ ಎರಡು ಹೊಸ ಕೂಡು ಲಸಿಕೆಗಳು ತಯಾರಾಗಿವೆ. ವ್ಯೆತ್ ಕಂಪೆನಿಯ ಪ್ರೆವ್ನಾರ್ ಎಂಬ ಹೆಸರಿನ ಲಸಿಕೆಯಲ್ಲಿ ನ್ಯೂಮೋಕಾಕಸ್ ಬ್ಯಾಕ್ಟೀರಿಯಾದ ಏಳು ಉಪವಿಧಗಳನ್ನು ಬಳಸಿಕೊಳ್ಳಲಾಗಿದ್ದರೆ, ಜಿಎಸ್ಕೆಯ ಸಿನ್ ಫ್ಲಾರಿಕ್ಸ್ ನಲ್ಲಿ 10 ಉಪವಿಧಗಳನ್ನು ಸೇರಿಸಲಾಗಿದೆ. ಹಾಗಾಗಿ ಇವು ಹಲವು ಲಸಿಕೆಗಳ ಕೂಡು ಲಸಿಕೆಗಳಾಗಿವೆ. ಪ್ರೆವ್ನಾರ್ ನಲ್ಲಿ 4, 6B, 9V, 14, 18C, 19F ಹಾಗೂ 23F ಉಪವಿಧಗಳು ಸೇರಿದ್ದರೆ, ಸಿನ್ ಫ್ಲಾರಿಕ್ಸ್ ನಲ್ಲಿ 1, 4, 5, 6B, 7F, 9V, 14, 18C, 19F, ಮತ್ತು 23F ಉಪವಿಧಗಳು ಸೇರಿವೆ. ಪ್ರೆವ್ನಾರ್ ನಲ್ಲಿಲ್ಲದೆ ಸಿನ್ ಫ್ಲಾರಿಕ್ಸ್ ನಲ್ಲಿ ಮಾತ್ರವಿರುವ 1, 5 ಮತ್ತು 7F ಉಪವಿಧಗಳೇ ಶೇ.5-25ರಷ್ಟು ನ್ಯೂಮೋಕಾಕಸ್ ಸೋಂಕುಗಳಿಗೆ ಕಾರಣವೆಂದು ಜಿಎಸ್ಕೆ ಹೇಳಿಕೊಂಡಿದೆ.[12,13]
ಆದರೆ, ನ್ಯುಮೋನಿಯಾ ಉಂಟಾಗುವುದಕ್ಕೆ ಈ ಹತ್ತು ಉಪವಿಧಗಳಷ್ಟೇ ಕಾರಣವೇ? ಭಾರತದಲ್ಲಾಗಲೀ, ಇತರ ಯಾವುದೇ ದೇಶದಲ್ಲಾಗಲೀ ಈ ಲಸಿಕೆಗಳಲ್ಲಿರುವ ಉಪವಿಧಗಳಿಂದಲೇ ನ್ಯುಮೋನಿಯಾ ಉಂಟಾಗುತ್ತದೆಯೆನ್ನುವುದಕ್ಕೆ ಯಾವುದೇ ಆಧಾರಗಳಿಲ್ಲ, ಆ ನಿಟ್ಟಿನಲ್ಲಿ ಸಾಕಷ್ಟು ಅಧ್ಯಯನಗಳೂ ಆದಂತಿಲ್ಲ. ಅಚ್ಚರಿಯ ಸಂಗತಿಯೆಂದರೆ, ನ್ಯೂಮೋಕಾಸ್ ನಿಂದ ಉಂಟಾಗುವ ನ್ಯುಮೋನಿಯಾವನ್ನು ತಡೆಯುವಲ್ಲಿ ಈ ಲಸಿಕೆಗಳು ಬಹಳಷ್ಟು ಪರಿಣಾಮಕಾರಿಯಾಗಿವೆಯೆಂದು ಅವುಗಳನ್ನು ತಯಾರಿಸಿ ಮಾರುತ್ತಿರುವ ಕಂಪೆನಿಗಳೇ ಗಟ್ಟಿಯಾಗಿ ಹೇಳಿಕೊಳ್ಳುತ್ತಿಲ್ಲ![11] ಆದ್ದರಿಂದ ಈ ಕೂಡು ಲಸಿಕೆಗಳನ್ನು ನೀಡುವುದರಿಂದ ಮಕ್ಕಳನ್ನು ನ್ಯುಮೋನಿಯದಿಂದ ರಕ್ಷಿಸಬಹುದೆನ್ನುವುದಕ್ಕೂ, ಅದರಿಂದ ಲಕ್ಷಗಟ್ಟಲೆ ಮಕ್ಕಳ ಜೀವರಕ್ಷಣೆಯು ಸಾಧ್ಯವೆನ್ನುವುದಕ್ಕೂ ಯಾವ ಆಧಾರಗಳೂ ಲಭ್ಯವಿಲ್ಲ.
ಲಸಿಕೆಯೊಳಗೆ ಸೇರಿರದ ನ್ಯೂಮೋಕಾಕಸ್ ನ ಇತರ ಉಪವಿಧಗಳಿಂದ ನ್ಯುಮೋನಿಯಾವೂ ಸೇರಿದಂತೆ ಹಲವು ಸೋಂಕುಗಳು ಉಂಟಾಗಬಹುದೆನ್ನುವುದನ್ನು ಅಧ್ಯಯನಗಳು ತೋರಿಸಿವೆ.[14-16] ಇನ್ನೊಂದೆಡೆ, ಮಕ್ಕಳಿಗೆ ಈ ಹೊಸ ಲಸಿಕೆಯನ್ನು ಹಾಕತೊಡಗಿದ ಬಳಿಕ ಲಸಿಕೆಯಲ್ಲಿಲ್ಲದ ನ್ಯೂಮೋಕಾಕಸ್ ವಿಧಗಳಿಂದ ಸೋಂಕಿನ ಪ್ರಕರಣಗಳು ಬಹಳಷ್ಟು ಹೆಚ್ಚಿದ ಬಗ್ಗೆ ಅಲಾಸ್ಕಾದಿಂದ ವರದಿಯಾಗಿದೆ.[17] ಆದ್ದರಿಂದ ನ್ಯೂಮೋಕಾಕಸ್ ಲಸಿಕೆಯಿಂದ ಆ ಸೋಂಕಿನ ಒಟ್ಟು ಪ್ರಮಾಣದಲ್ಲಿ ಯಾವುದೇ ಇಳಿಕೆಯಾಗುತ್ತದೆಯೆಂದು ನಂಬುವುದಕ್ಕೂ ಯಾವುದೇ ಆಧಾರಗಳಿಲ್ಲ.
ಈ ಲಸಿಕೆಗಳು ಸುರಕ್ಷಿತವೇ?
ಈ ಲಸಿಕೆಗಳ ಸುರಕ್ಷಿತತೆಯ ಬಗ್ಗೆ ಎಲ್ಲೂ ಸಾಕಷ್ಟು ಆಳವಾದ ಅಧ್ಯಯನಗಳಾದ ಬಗ್ಗೆ ವರದಿಗಳಿಲ್ಲ. ಈಗಾಗಲೇ ನ್ಯುಮೋಕಾಕಸ್ ಸೋಂಕಿನಿಂದ ಬಳಲಿರುವವರ ದೇಹದಲ್ಲಿ ಪ್ರತಿಕಾಯಗಳಿದ್ದರೆ ಅವು ಈ ಲಸಿಕೆಯೊಂದಿಗೆ ವರ್ತಿಸಿ ಗಂಭೀರವಾದ ಸಮಸ್ಯೆಗಳು ಉಂಟಾಗಬಹುದು. ಪ್ರೆವ್ನಾರ್ ನ ಬಗ್ಗೆ ನಡೆಸಲಾಗಿರುವ ಅಧ್ಯಯನಗಳ ವಿವರಗಳನ್ನು ಗಮನಿಸಿದರೆ, ಈ ಲಸಿಕೆಯಿಂದ ಸಾಕಷ್ಟು ಅಡ್ಡ ಪರಿಣಾಮಗಳಾಗಿರುವ ಬಗ್ಗೆ ತಿಳಿಯುತ್ತದೆ. ಇತರ ಲಸಿಕೆಗಳೊಂದಿಗೆ ಹೋಲಿಸಿದರೆ, ನ್ಯುಮೋಕಾಕಸ್ ಕೂಡು ಲಸಿಕೆಯಲ್ಲಿ ಅಡ್ಡ ಪರಿಣಾಮಗಳಾಗುವ ಸಾಧ್ಯತೆಗಳು ಹೆಚ್ಚು ಎನ್ನುವುದನ್ನು ಈ ಅಧ್ಯಯನಗಳು ಸ್ಪಷ್ಟವಾಗಿ ತೋರಿಸುತ್ತವೆ. [11]

ಪ್ರಯೋಜನವೂ ಇಲ್ಲ, ಸುರಕ್ಷಿತವೂ ಅಲ್ಲ; ಹಾಗಾದರೆ ಈ ಲಸಿಕೆಯ ಬಗ್ಗೆ ಒತ್ತಡ ಹೇರುವ ಪ್ರಚಾರವೇಕೆ?
ಈ ಲಸಿಕೆಯ ಹಿಂದೆ ಕೆಲಸ ಮಾಡುತ್ತಿರುವ ಶಕ್ತಿಗಳ ಬಗ್ಗೆ ತಿಳಿಯಬೇಕಾದರೆ ಸಾಕಷ್ಟು ಕೆದಕಿ ಹುಡುಕಬೇಕು. ನ್ಯುಮೋಕಾಕಸ್ ನ್ಯುಮೋನಿಯಾದಿಂದ ನಮ್ಮ ಮಕ್ಕಳ ಜೀವವುಳಿಸಲು ಮುಂದಾಗಿರುವ ನ್ಯೂಮೋಕಾಕಸ್ ರೋಗ ನಿಯಂತ್ರಣಕ್ಕಾಗಿರುವ ಭಾರತೀಯ ತಜ್ಞರ ಒಕ್ಕೂಟವು ನ್ಯೂಮೋಕಾಕಸ್ ರೋಗ ನಿಯಂತ್ರಣಕ್ಕಾಗಿ ಏಷ್ಯಾಮಟ್ಟದ ತಜ್ಞರ ಒಕ್ಕೂಟದ (ಅಸಾಪ್) ಭಾಗವಾಗಿದೆ.[18] ಈ ಏಷ್ಯಾ ಮಟ್ಟದ ಒಕ್ಕೂಟವು ಅಂತರರಾಷ್ಟ್ರೀಯ ಲಸಿಕಾ ಉಪಕ್ರಮ (ಐವಿಐ)ದ ಅಂಗವಾಗಿದೆ.[19] ಐವಿಐ ಯು ಜಾಗತಿಕ ಲಸಿಕೆ ಮತ್ತು ಪ್ರತಿರಕ್ಷಣಾ ಒಕ್ಕೂಟ(ಜಿಎವಿಐ) ದಿಂದ ನೆರವನ್ನು ಪಡೆಯುತ್ತದೆ. [20] ಜಿಎವಿಐ ಯು ಬಿಲ್ ಗೇಟ್ಸ್ ದತ್ತಿನಿಧಿಯ ನೆರವಿನಿಂದ ನಡೆಯುತ್ತದೆ. [21] ನ್ಯುಮೋಕಾಕಸ್ ಲಸಿಕೆಯನ್ನು ರಾಷ್ಟ್ರೀಯ ಲಸಿಕೆ ಕಾರ್ಯಕ್ರಮಗಳಲ್ಲಿ ಸೇರಿಸುವಂತೆ ಜಗತ್ತಿನ ಎಲ್ಲಾ ರಾಷ್ಟ್ರಗಳ ಮೇಲೆ ಒತ್ತಡ ಹೇರುವುದಕ್ಕಾಗಿ ಹಲವು ಹೆಸರಿನ ತಜ್ಞರ ಒಕ್ಕೂಟಗಳನ್ನು ಈ ಜಿಎವಿಐ ಹುಟ್ಟು ಹಾಕಿದೆ ಯಾ ಬೆಂಬಲಿಸುತ್ತಿದೆ. [22-24] ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ನ್ಯುಮೋಕಾಕಸ್ ಸೋಂಕನ್ನು ತಡೆಯುವುದಕ್ಕಾಗಿ ಸರ್ವ ಪಕ್ಷಗಳ ಸಂಸದೀಯ ಗುಂಪೊಂದನ್ನೂ ಜಿಎವಿಐ ಬೆಂಬಲಿಸುತ್ತಿದೆ.[25] ಹೀಗೆ ನ್ಯುಮೋಕಾಕಸ್ ನಿಂದ ಉಂಟಾಗುವ ಕಾಹಿಲೆಗಳ ಬಗ್ಗೆ ಹಲವರಲ್ಲಿ ಒಮ್ಮಿಂದೊಮ್ಮಿಗೇ ಪ್ರೀತಿಯುಕ್ಕಿದೆ.

ಜಿಐವಿಐ ಯ ಬೆಂಬಲಕ್ಕಿರುವ ಬಿಲ್ ಗೇಟ್ಸ್, ಹಲವು ದೈತ್ಯ ಔಷಧ ಕಂಪೆನಿಗಳಲ್ಲಿ ಹಣ ತೊಡಗಿಸಿರುವುದು ಹಳೇ ಸುದ್ದಿ.[26] ಅಮೆರಿಕಾದ ಮಹಾದೈತ್ಯ ಫೈಜರ್ ಕೂಡಾ ಅವುಗಳಲ್ಲೊಂದು. ಇದೇ ಫೈಜರ್, ವ್ಯೆತ್ ಕಂಪೆನಿಯನ್ನು ಇತ್ತೀಚೆಗೆ ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ. [27] ನ್ಯುಮೋಕಾಕಸ್ ಕೂಡು ಲಸಿಕೆಯನ್ನು ಇದೇ ವ್ಯೆತ್ ತಯಾರಿಸುತ್ತಿದೆ, ಇದೇ ಕೂಡು ಲಸಿಕೆಯನ್ನು ಜಿಎವಿಐ ಮುಂದೊತ್ತುತ್ತಿದೆ ಮತ್ತು ಬಿಲ್ ಗೇಟ್ಸ್ ನೀಡಿರುವ ಸಹಾಯಕ್ಕೆ ವ್ಯೆತ್ ತನ್ನ ಕೃತಜ್ಞತೆಗಳನ್ನು ಪ್ರಕಟಿಸಿಯೂ ಆಗಿದೆ.[28-31] ಭಾರತವೂ ಸೇರಿದಂತೆ ವಿಶ್ವದಾದ್ಯಂತದ ಬಡವರ ಆರೋಗ್ಯ ಸುಧಾರಣೆಗಾಗಿ ಬಿಲ್ ಗೇಟ್ಸ್ ಮಹಾಶಯನ ಅತ್ಯಮೂಲ್ಯವಾದ ಕೊಡುಗೆಯನ್ನು ಪರಿಗಣಿಸಿ ನಮ್ಮ ಸರಕಾರವೂ ಆತನನ್ನು ಶಾಲು ಹೊದಿಸಿ ಸನ್ಮಾನಿಸಿ ಕೃತಾರ್ಥವಾಗಿದೆ. ಸನ್ಮಾನ ಸ್ವೀಕರಿಸಿ ಆತ ನಕ್ಕನೆಂದು ಪತ್ರಿಕೆಗಳು ವರದಿ ಮಾಡಿವೆ.[32,33]
ಬಿಲ್ ಗೇಟ್ಸ್ ನಮ್ಮ ಆರೋಗ್ಯಕ್ಕೆ ನೀಡುತ್ತಿರುವ ಕೊಡುಗೆಯ ಬಗ್ಗೆ ಈ ಹಿಂದೆ ಲಾಂಸೆಟ್ ಪತ್ರಿಕೆಯಲ್ಲಿ ಪ್ರಕಟವಾಗಿರುವ ಲೇಖನ ಹಾಗೂ ನ್ಯುಮೋನಿಯಾ ಲಸಿಕೆಗಳಿಗೆ ಜಿಐವಿಐ ನೆರವಿನ ಬಗ್ಗೆ ಡಾ| ಗೋಪಾಲ ದಾಬಡೆಯವರು ಲಾಂಸೆಟ್ ನಲ್ಲಿ ಬರೆದಿರುವ ಪತ್ರಗಳು ಇಲ್ಲಿವೆ. ಓದಿ ನೋಡಿ.
- http://arogyasampada.com/ದಾನಶೂರ-ಬಿಲ್-ಗೇಟ್ಸನೂ-ನಮ್ಮ-ಆರೋಗ್ಯವೂ
- The Bill & Melinda Gates Foundation's grant-making programme for global health - ಪೂರ್ಣ ಲೇಖನ ಇಲ್ಲಿದೆ
- ದಿ ಲಾನ್ಸೆಟ್ ನಲ್ಲಿ ಡಾ| ಗೋಪಾಲ ದಾಬಡೆ ಪತ್ರ ; ಜೂನ್ 30ರ ದಿ ಹಿಂದೂ ವರದಿ (ಸೇರ್ಪಡೆ: ಜೂನ್ 30, 2009)
ಹೆಚ್ಚಿನ ಮಾಹಿತಿಗಾಗಿ ಆಕರಗಳು :
- http://timesofindia.indiatimes.com/NEWS/City/Bangalore/New-vaccine-may-c...
- http://www.zeenews.com/news550425.html
- http://www.hindu.com/2009/01/16/stories/2009011653120300.htm
- http://www.hindu.com/thehindu/holnus/099200907261752.htm
- Bull World Health Organ vol.87 no.6 Genebra June 2009. Available at http://www.scielosp.org/scielo.php?script=sci_arttext&pid=S0042-96862009...
- http://www.ehealthmd.com/library/pneumonia/PNM_causes.html
- Mark I Neuman. Pneumonia At http://emedicine.medscape.com/article/803364-overview
- http://www.merck.com/mmhe/sec04/ch042/ch042a.html
- Mats Kalin. Pneumococcal serotypes and their clinical relevance Thorax 1998;53:159-162 Available at http://thorax.bmj.com/cgi/content/full/53/3/159
- Hoile E. Pneumococcal serotypes in Europe: results of a surveillance report for 1999. Euro Surveill. 2002;6(31):pii=1908. Available online: http://www.eurosurveillance.org/ViewArticle.aspx?ArticleId=1908/li
- http://www.rxlist.com/prevnar-drug.htm#
- http://www.wyeth.com/products?product=/wyeth_html/home/products/prescription/Prevnar%C2%AE,%20Pneumococcal%207-valent%20Conjugate%20Vaccine%20(Diphtheria%20CRM197%20Protein)/Prevnar%C2%AE,%20Pneumococcal%207-valent%20Conjugate%20Vaccine%20(Diphtheria%20CRM197%20Protein)_overview.html
- http://www.gsk.com/media/pressreleases/2009/2009_pressrelease_10039.htm
- Serotype-Specific Epidemiology of Invasive Pneumococcal Disease Among Hospitalized Children in the Pre-vaccine Era in Kenya Available at http://www.netspear.org/Data/Serotype%20Specific.pdf
- Harboe ZB et al. Pneumococcal Serotypes and Mortality following Invasive Pneumococcal Disease: A Population-Based Cohort Study. Available at
http://www.plosmedicine.org/article/info:doi/10.1371/journal.pmed.1000081 - Hansman D. Serotypes of Pneumococci in Pneumonia, Meningitis and Other Pneumococcal Infections Internal Medicine Journal Volume 7 Issue 3, Pages 267 - 270. Available at http://www3.interscience.wiley.com/journal/119634777/abstract?CRETRY=1
- Singleton RJ et al .Invasive Pneumococcal Disease Caused by Nonvaccine Serotypes Among Alaska Native Children With High Levels of 7-Valent Pneumococcal Conjugate Vaccine Coverage
JAMA. 2007;297:1784-1792. Available at http://jama.ama-assn.org/cgi/content/abstract/297/16/1784 - http://www.expresshealthcaremgmt.com/200811/market08.shtml
- http://www.korea.net/News/news/NewsView.asp?serial_no=20071213005&part=1...
- http://www.ivi.org/support/support.html
- http://www.gavialliance.org/
- http://pneumoasap.org/AboutUs.aspx
- http://www.preventpneumo.org/index.cfm
- http://www.preventpneumo.org/news/pneumofocus/newsletter/december07.html
- The All-Party Parliamentary Group on Pneumococcal Disease Prevention in the Developing World At http://www.appg-preventpneumo.org/
- http://100777.com/node/1331
- http://www.ibtimes.co.in/articles/20090127/pfizer-and-wyeth-sixty-eight-...
- http://www.preventpneumo.org/vaccine_status/pneumococcal_vaccines/index.cfm
- http://www.gavialliance.org/vision/policies/new_vaccines/pneumococcal/in...
- http://optimistworld.com/Bill-Gates-Foundation-pledged-$1,5-billion-deliver-vaccines-poor/
- http://www.medicalnewstoday.com/articles/57873.php
- http://www.physorg.com/news167808701.html
- http://www.businessday.co.za/articles/Content.aspx?id=76837
- Add new comment
- 906 reads
