There are currently 0 users and 3 guests online.

ನೀವೂ ಪ್ರಕಟಿಸಬಹುದು!

ಆರೋಗ್ಯ ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

Medicine

ಆರೋಗ್ಯ ಸಂಪದದಲ್ಲಿ


ಹೊಸ ರೂಪದಲ್ಲಿ ಬಂದ ಹಳೆಯ ಇನ್ ಫ್ಲುಯೆಂಜಾ ಈಗಾಗಲೇ ನಮ್ಮ ದೇಶವೂ ಸೇರಿದಂತೆ ವಿಶ್ವದಾದ್ಯಂತ ಲಕ್ಷಗಟ್ಟಲೆ ಜನರನ್ನು ಸೋಂಕಿದೆ. ಸೋಂಕು ತಗಲಿದವರಲ್ಲಿ ಶೇ.99.1ರಷ್ಟು ಮಂದಿ ಯಾವುದೇ ತೊಂದರೆಗಳಿಲ್ಲದೆ, ಯಾವುದೇ ಚಿಕಿತ್ಸೆಯಿಲ್ಲದೆ ತಂತಾನೇ ಗುಣಮುಖರಾಗಿದ್ದಾರೆ. ಆದರೆ ಆರೋಗ್ಯ ಪಾಲನೆಯ ನೀತಿ-ನಿಯಮಗಳನ್ನು ರೂಪಿಸುವ ಘನ ಜವಾಬ್ದಾರಿಯುಳ್ಳ ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಅಮೆರಿಕಾದ ಸಿ.ಡಿ.ಸಿ ಗಳು ಕಿಡಿಯೇ ಇಲ್ಲದಲ್ಲಿ ಹೊಗೆಯೆಬ್ಬಿಸಿ ಎಲ್ಲರನ್ನೂ ಗೊಂದಲಕ್ಕೆ ದೂಡುವ ಕೆಲಸವನ್ನು ಮಾಡಿದವು ಎನ್ನುವುದು ದಿನ ಕಳೆದಂತೆಲ್ಲ ಸ್ಪಷ್ಟವಾಗುತ್ತಿದೆ. ಈ ‘ಹೊಸ’ ವೈರಸ್ ಗುರುತಿಸಲ್ಪಟ್ಟ ಎಪ್ರಿಲ್ ತಿಂಗಳಿಂದಲೇ ಅದರ ಬಗ್ಗೆ ಆಧಾರರಹಿತವಾದ ಪುಕಾರುಗಳನ್ನು ತೇಲಿಬಿಟ್ಟು ಜಗತ್ತಿನಾದ್ಯಂತ ಭೀತಿಯನ್ನು ಸೃಷ್ಟಿಸಲಾಯಿತು, ಎಲ್ಲೆಂದರಲ್ಲಿ ಅತ್ತಿತ್ತ ಹೋಗುವವರನ್ನು ತಪಾಸಣೆ ನಡೆಸುವಂತೆಯೂ, ಕೆಮ್ಮಿದವರಲ್ಲೂ, ಸೀನಿದವರಲ್ಲೂ ವೈರಸ್ ಪತ್ತೆಗಾಗಿ ಅತಿ ದುಬಾರಿಯಾದ ಪರೀಕ್ಷೆಗಳನ್ನು ನಡೆಸುವಂತೆಯೂ ಸೂಚಿಸಲಾಯಿತು. ಜ್ವರವಿದ್ದವರಿಗೆ, ಸೀನಿದವರಿಗೆ, ಗಂಟಲು ಕೆರೆದವರಿಗೆ, ಅಷ್ಟೇ ಅಲ್ಲ, ಅಂತಹವರ ಮನೆಮಂದಿಗೆ ಹಾಗೂ ಸಂಪರ್ಕಕ್ಕೆ ಬಂದ ಎಲ್ಲರಿಗೂ ಟಾಮಿಫ್ಲು (ಒಸೆಲ್ಟಾಮಿವಿರ್) ಎಂಬ ಔಷಧವನ್ನು ನೀಡಬೇಕೆಂಬ ಸಲಹೆಯನ್ನೂ ನೀಡಲಾಯಿತು. ಈ ಸಲಹೆ, ಅದಕ್ಕೆ ದೊರೆತ ಅಬ್ಬರದ ಪ್ರಚಾರ ಹಾಗೂ ಅದರಿಂದ ಹುಟ್ಟಿದ ಜನಾಭಿಪ್ರಾಯದ ಒತ್ತಡದಿಂದಾಗಿ ಹೆಚ್ಚಿನ ರಾಷ್ಟ್ರಗಳು ಕೋಟಿಗಟ್ಟಲೆಯಲ್ಲಿ ಟಾಮಿಫ್ಲು ಖರೀದಿಸುವಂತಾಯಿತು. ರೋಗ ತಗಲಿದ ಬಹುತೇಕರು ಟಾಮಿಫ್ಲು ತೆಗೆದುಕೊಳ್ಳದೆಯೂ ಗುಣಮುಖರಾದರು; ರೋಗ ಉಲ್ಬಣಿಸಿದವರು ಟಾಮಿಫ್ಲು ತೆಗೆದುಕೊಂಡರೂ ಬದುಕುಳಿಯಲಿಲ್ಲ. ಈ ಔಷಧದಿಂದ ಪ್ರಯೋಜನವಿದೆಯೇ ಎನ್ನುವ ಪ್ರಶ್ನೆಯನ್ನು ಆಗ ಯಾರೂ ಕೇಳಲಿಲ್ಲ; ಸಮೂಹ ಸನ್ನಿಯ ವೇಳೆ ಅದನ್ನು ಕೇಳುವಂತೆಯೂ ಇರಲಿಲ್ಲ. Read more »

1286 reads

ಆರೋಗ್ಯ ಸಂಪದದಲ್ಲಿ

ಮನುಷ್ಯ ಕೃಷಿಕಾರ್ಯಗಳಲ್ಲಿ ತೊಡಗಿದಾಗ ತನಗೆ ನೆರವಾಗಲೆಂದು ಆಕಳನ್ನು ಸಾಕಲಾರಂಭಿಸಿದ.[1] ಇಂದು ಕೃಷಿಕೆಲಸಗಳು ಸಾಕಷ್ಟು ಯಾಂತ್ರೀಕೃತಗೊಂಡಿರುವುದರಿಂದ ಸಾಕಲ್ಪಟ್ಟ ಮೂಲ ಉದ್ದೇಶಕ್ಕೆ ಈ ಪ್ರಾಣಿಗಳು ಅಪ್ರಸ್ತುತವೆನಿಸಿಬಿಟ್ಟಿವೆಯಾದರೂ, ಕೃಷಿಪ್ರಧಾನವಾದ ನಮ್ಮ ಸಮಾಜದಲ್ಲಿ ಅವುಗಳಿಗಿದ್ದ ಪ್ರಾಮುಖ್ಯತೆಯನ್ನು ಇನ್ನಷ್ಟು ಎತ್ತರಕ್ಕೇರಿಸಿ, 'ಎರಡನೇ ತಾಯಿ',[2] 'ವಿಶ್ವದ ಮಾತೆ'[3,4] ಎಂಬಿತ್ಯಾದಿಯಾಗಿ ಬಿಂಬಿಸುವ ಪ್ರಯತ್ನಗಳೀಗ ವ್ಯವಸ್ಥಿತವಾಗಿ ನಡೆಯುತ್ತಿವೆ. 'ಗೋ ಮಾತೆಯ' ರಕ್ಷಣೆಗಾಗಿ ನಡೆಯುತ್ತಿರುವ 'ಹೋರಾಟಗಳು',[4,5] ದನದ ಗೌರವ ರಕ್ಷಣೆಗಾಗಿ ನಡೆದ ದಲಿತರ ಕೊಲೆಗಳು ಮತ್ತು ಹಲವಾರು ದೊಂಬಿಗಳನ್ನು[6,7] ನೋಡಿದಾಗ, ನಮ್ಮ ದೇಶದಲ್ಲಿ ಮನುಷ್ಯನ ಜೀವಕ್ಕಿಂತ ಸತ್ತಿರುವ ದನದ ಸ್ಥಾನಮಾನವೇ ಹೆಚ್ಚೆಂದು ಅನಿಸದಿರಲಾರದು. Read more »

4304 reads

ಆರೋಗ್ಯ ಸಂಪದದಲ್ಲಿ

ವಿಪತ್ತನ್ನು ಎದುರಿಸಲು ನಾವು ಸರ್ವಸನ್ನದ್ಧರಾಗಿರುವುದು ಅಪರೂಪವೇ ಆಗಿರುವುದರಿಂದ ಅಂತಹದೇನಾದರೂ ಧುತ್ತನೆ ಬಂದೆರಗಿದರೆ ತಡಬಡಾಯಿಸುವುದು ಸಾಮಾನ್ಯ ಕ್ರಮವೇ ಆಗಿಬಿಟ್ಟಿದೆ. ಅಂತಹಾ ಸಂದರ್ಭಗಳನ್ನು 'ಸದುಪಯೋಗಪಡಿಸಿಕೊಳ್ಳಲು' ಯತ್ನಿಸುವವರೂ ಬೇಕಷ್ಟಿದ್ದಾರೆ. ಇತ್ತೀಚೆಗೆ ದಕ್ಷಿಣ ಕನ್ನಡ ಹಾಗೂ ಇತರ ಜಿಲ್ಲೆಗಳಲ್ಲಿ ಚಿಕುಂಗುನ್ಯಾ ರೋಗವು ಹರಡಲಾರಂಭಿಸಿದ ಸಂದರ್ಭದಲ್ಲಿಯೂ ಇಂತಹುದೇ ನಡೆಯಿತು. ರೋಗದ ನಿಯಂತ್ರಣಕ್ಕೆ ಯಾವುದೇ ಯೋಚನೆಗಳಾಗಲೀ, ಯೋಜನೆಗಳಾಗಲೀ ಇಲ್ಲದಿದ್ದ ಆರೋಗ್ಯ ಇಲಾಖೆಯ ಅಧಿಕಾರಿಗಳು, ಆಧುನಿಕ ವೈದ್ಯಶಾಸ್ತ್ರದಲ್ಲಿ ಚಿಕುಂಗುನ್ಯಾ ರೋಗಕ್ಕೆ ಔಷಧಗಳಾಗಲೀ, ತಡೆಯಬಲ್ಲ ಉಪಾಯಗಳಾಗಲೀ ಇಲ್ಲವೆಂದು ತಮ್ಮ ಕೈತೊಳೆದುಕೊಂಡರು. Read more »

3641 reads

ಆರೋಗ್ಯ ಸಂಪದದಲ್ಲಿ

ಮಧುಮೇಹ ರೋಗದ ಚಿಕಿತ್ಸೆಯು ಒಂದು ಅತಿ ದೊಡ್ಡ ಉದ್ಯಮವಾಗಿ ಬೆಳೆಯುತ್ತಿದೆ ಎಂದರೆ ತಪ್ಪಾಗದು. ಅತಿ ಕಿರಿಯ ವಯಸ್ಸಿನಿಂದಲೇ ತಿನ್ನಬಹುದಾದ ಸಂಸ್ಕರಿತ ಆಹಾರಗಳನ್ನು ತಯಾರಿಸಿ, ಆಕರ್ಷಕವಾದ ಜಾಹೀರಾತುಗಳ ಮೂಲಕ ಅವನ್ನು ಮಾರಾಟ ಮಾಡಿ, ಆಧುನಿಕತೆಯ ರೋಗಗಳಾದ ಬೊಜ್ಜು, ಮಧುಮೇಹ, ಅಧಿಕ ರಕ್ತದೊತ್ತಡ, ಹೃದ್ರೋಗ ಇತ್ಯಾದಿಗಳಿಗೆ ಕಾರಣವಾಗುತ್ತಿರುವ ಬಹುರಾಷ್ಟ್ರೀಯ ಆಹಾರೋದ್ಯಮ ಒಂದೆಡೆ. ಮಧುಮೇಹವು ಒಂದು ಭೀಕರವಾದ ಕಾಹಿಲೆಯೆಂದೂ, ಅದೀಗ ವಿಪರೀತವಾಗಿ ಹೆಚ್ಚುತ್ತಿದೆಯೆಂದೂ, ಅದಕ್ಕೆ ಆರಂಭದಿಂದಲೇ ಚಿಕಿತ್ಸೆಯನ್ನು ನೀಡಬೇಕಾದದ್ದು ಅತ್ಯಗತ್ಯವೆಂದೂ ಬೊಬ್ಬಿಡುತ್ತಿರುವ ಬಹುರಾಷ್ಟ್ರೀಯ ಔಷಧ ಕಂಪೆನಿಗಳು ಇನ್ನೊಂದೆಡೆ. Read more »

8848 reads

ಆರೋಗ್ಯ ಸಂಪದದಲ್ಲಿ

ಕೆಲದಿನಗಳ ಹಿಂದೆ ಹಿರಿಯರೊಬ್ಬರನ್ನು ಆಸ್ಪತ್ರೆಯಲ್ಲಿ ದಾಖಲಿಸಿದ್ದೆ. ಮರುದಿನ ಅವರನ್ನು ನೋಡಲೆಂದು ಹೋಗಿದ್ದಾಗ ಅವರ ಕೊಠಡಿಯ ಹೊರಗೆ ನಿಂತಿದ್ದ ಸುಮಾರು ಎರಡು ವರ್ಷದ ಮಗುವೊಂದು ಪೊಟ್ಟಣವೊಂದರಿಂದ ಕುರುಂಕುರುಂ ತಿಂಡಿಯನ್ನು ಬಾಯಿಯೊಳಗೆ ತುರುಕಿಕೊಂಡು ತಿನ್ನುತ್ತಿದ್ದುದನ್ನು ನೋಡಿದೆ. ನಾನು ಒಳಹೊಕ್ಕಾಗ ಆ ಮಗುವೂ ನನ್ನ ಹಿಂದೆಯೇ ಬಂದಳು. ನಾನು ರೋಗಿಯನ್ನು ಪರೀಕ್ಷಿಸಿ ಇನ್ನೇನು ಹೊರ ನಡೆಯುವುದರಲ್ಲಿದ್ದಾಗ ಅಲ್ಲೇ ಇದ್ದ ಮೇಜಿನ ಮೇಲೆ ಅಂಟಾಸಿಡ್ ನ ಬಾಟಲಿಯೊಂದು ನನ್ನ ಕಣ್ಣಿಗೆ ಬಿತ್ತು. ನಾನು ಇದನ್ನು ಬರೆದೇ ಇಲ್ಲವಲ್ಲ, ಇದೇಕೆ ಇಲ್ಲಿದೆ ಅಂತ ದಾದಿಯಲ್ಲಿ ವಿಚಾರಿಸಿದೆ.
“ಇಲ್ಲ, ಅದು ಅವರದ್ದಲ್ಲ, ನನ್ನ ಮಗುವಿಗೆ ಮಕ್ಕಳ ವೈದ್ಯರು ಬರೆದು ಕೊಟ್ಟದ್ದು” ಅಂದಳು ನನ್ನ ರೋಗಿಯ ಮಗಳು.
“ಯಾಕೆ” ಅಂದೆ. Read more »

3633 reads
Syndicate content