There are currently 0 users and 1 guest online.

ನೀವೂ ಪ್ರಕಟಿಸಬಹುದು!

ಆರೋಗ್ಯ ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

Ongoing Campaigns

ಆರೋಗ್ಯ ಸಂಪದದಲ್ಲಿ

ಕಳೆದ ಕೆಲದಿನಗಳಿಂದ ಮಾಧ್ಯಮಗಳ ತುಂಬೆಲ್ಲ ಆವರಿಸಿಕೊಂಡಿರುವ ಸ್ವಯಂಘೋಷಿತ ರಾಷ್ಟ್ರಸಂತ ಬಾಬಾ ರಾಮದೇವ ಸ್ವಾಮೀಜಿಯ ಹೇಳಿಕೆಗಳು ಹಾಗೂ ವಾಸ್ತವಗಳ ನಡುವೆ ಒಂದು ಸಣ್ಣ ತುಲನೆ ಇಲ್ಲಿದೆ:
 
ಹೇಳಿಕೆ 1: 

ಎಳೆಯ ವಯಸ್ಸಿನಲ್ಲಿ ತನಗೆ ಎಡ ಭಾಗದ ಪಾರ್ಶ್ವವಾಯುವುಂಟಾಗಿತ್ತು; ಋಷಿ ದಯಾನಂದ ಹಾಗೂ ಹಲವು ಮಹಾನುಭಾವರ ಆತ್ಮಕಥೆಗಳನ್ನು ಓದಿದ ಬಳಿಕ ತನ್ನ ಜೀವನವೇ ಬದಲಾಯಿತು ಎನ್ನುವುದು ರಾಮದೇವನ ಹೇಳಿಕೆ. [ ನೋಡಿ ] ವ್ಹಾ!

ಅವನ ವಿಡಿಯೋ ವನ್ನು ಸೂಕ್ಷ್ಮವಾಗಿ ಪರಿಶೀಲಿಸಿ.

ರಾಮದೇವನ ಎಡ ಕಣ್ಣು ಮಿಟುಕುತ್ತಿರುತ್ತದೆ, ಬಾಯಿಯ ಎಡ ಭಾಗವು ಸರಿಯಾಗಿ ತೆರೆದುಕೊಳ್ಳುತ್ತದೆ ಹಾಗೂ ಎಡಹಣೆಯಲ್ಲಿ ನೆರಿಗೆಗಳು ಸಹಜವಾಗಿ ಮೂಡುತ್ತವೆ. ಅವನ ಬಲಗಣ್ಣು ಎಡಗಣ್ಣಿನಷ್ಟು ಸಲೀಸಾಗಿ ಮಿಟುಕುವುದಿಲ್ಲ, ಬಾಯಿಯ ಬಲಭಾಗವು ಎಡಭಾಗದಷ್ಟು ಸುಲಭದಲ್ಲಿ ತೆರೆದುಕೊಳ್ಳುವುದಿಲ್ಲ ಹಾಗೂ ಹಣೆಯ ಬಲಭಾಗದಲ್ಲಿ ಎಡಭಾಗದಲ್ಲಿರುವಷ್ಟು ನೆರಿಗೆಗಳು ಮೂಡುವುದಿಲ್ಲ. ಅಂದರೆ ಅವನ ಮುಖದ ಬಲಭಾಗದ ಸ್ನಾಯುಗಳು ಎಡಭಾಗದ ಸ್ನಾಯುಗಳಷ್ಟು ಸಲೀಸಾಗಿ ಕೆಲಸ ಮಾಡುವುದಿಲ್ಲ. ಹೋಲಿಕೆಗಾಗಿ ಕೆಳಗೆ ನೀಡಿರುವ ಇನ್ನೊಂದು ವಿಡಿಯೋದಲ್ಲಿ ಇದನ್ನು ಇನ್ನಷ್ಟು ಸ್ಪಷ್ಟವಾಗಿ ಕಾಣಬಹುದು.

Read more »

854 reads

ಆರೋಗ್ಯ ಸಂಪದದಲ್ಲಿ

ಡೊಂಕು ಬಾಲದ ನಾಯಕರೇ, ನೀವೇನೂಟವ ಮಾಡಿದಿರಿ?
ಡಾ| ಶ್ರೀನಿವಾಸ ಕಕ್ಕಿಲ್ಲಾಯ, ಮಂಗಳೂರು

ಕಳೆದ ಕೆಲ ವಾರಗಳಲ್ಲಿ ರಾಜ್ಯದ ಎಲ್ಲೆಡೆಗಳಿಂದ ಬೀದಿನಾಯಿಗಳ ರಾಕ್ಷಸೀ ವರ್ತನೆಯ ವರದಿಗಳು ಸಮಸ್ತ ನಾಗರಿಕರೂ ಬೆಚ್ಚಿಬೀಳುವಂತೆ ಮಾಡಿವೆ. ಬೆಂಗಳೂರು ಮಹಾನಗರಿಯಲ್ಲಿ ತಮ್ಮ ಮನೆಯ ವಠಾರದಲ್ಲಿ ಆಟವಾಡುತ್ತಿದ್ದ ಇಬ್ಬರು ಮುಗ್ಧ ಮಕ್ಕಳನ್ನು ಬೀದಿನಾಯಿಗಳು ಕಚ್ಚಿ ಕೊಂದರೆ, ಮೈಸೂರು, ಶಿವಮೊಗ್ಗೆ ಮುಂತಾದೆಡೆಗಳಲ್ಲಿ ಮಕ್ಕಳಾದಿಯಾಗಿ ದಾರಿಯಲ್ಲಿ ಹೋಗುತ್ತಿದ್ದವರ ಮೇಲೆ ದಾಳಿ ಮಾಡಿದವು. ಈ ಘಟನೆಗಳಿಂದಾಗಿ ಬೀದಿನಾಯಿಗಳ ಸಮಸ್ಯೆಯು ಒಮ್ಮಿಂದೊಮ್ಮಿಗೇ ಭೂತಾಕಾರದಲ್ಲಿ ಗೋಚರಿಸತೊಡಗಿದೆ. Read more »

8855 reads

ಆರೋಗ್ಯ ಸಂಪದದಲ್ಲಿ

ಉರಿಯೂತ ನಿವಾರಕಗಳನ್ನು ಅತಿಯಾಗಿ ಬಳಸುವುದರಿಂದ ರಕ್ತನಾಳಗಳಲ್ಲಿ ದುಷ್ಪರಿಣಾಮಗಳಾಗಿ ಹೃದಯಾಘಾತ, ಪಾರ್ಶ್ವವಾಯು ಇತ್ಯಾದಿ ಸಮಸ್ಯೆಗಳುಂಟಾಗುವ ಬಗ್ಗೆ ಈ ಹಿಂದೆಯೇ ವರದಿಯಾಗಿತ್ತು. ಇದೀಗ ಪ್ರಕಟವಾಗಿರುವ ಇನ್ನೊಂದು ಅಧ್ಯಯನದ ವರದಿಯಂತೆ,[1,2] ದೀರ್ಘಕಾಲದವರೆಗೆ ಈ ಔಷಧಗಳನ್ನು ಬಳಸುವ ಗಂಡಸರಲ್ಲಿ ನಿಮಿರುವಿಕೆಗೂ ಅಡ್ಡಿಯಾಗುವ ಸಾಧ್ಯತೆಗಳಿವೆಯೆಂದು ಹೇಳಲಾಗಿದೆ. ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ನಡೆಸಲಾದ ಈ ಅಧ್ಯಯನದಲ್ಲಿ ಉರಿಯೂತ ನಿವಾರಕಗಳನ್ನು ಬಳಸುತ್ತಿದ್ದ ಸುಮಾರು 40 ಸಾವಿರದಷ್ಟು ಗಂಡಸರ ಪೈಕಿ ಶೇ. 29ರಷ್ಟು ಮಂದಿಯಲ್ಲಿ ಸಾಕಷ್ಟು ಗಂಭೀರವಾದ ನಿಮಿರುವಿಕೆಯ ಸಮಸ್ಯೆಯುಂಟಾದುದನ್ನು ಗುರುತಿಸಲಾಗಿದೆ. ನಿಮಿರುವಿಕೆಗೆ ಸ್ವಸ್ಥ ರಕ್ತನಾಳಗಳು ಹಾಗೂ ಸುಗಮವಾದ ರಕ್ತಸಂಚಾರವು ಅತ್ಯಗತ್ಯವಾಗಿದ್ದು, ಉರಿಯೂತ ನಿವಾರಕಗಳು ಇವಕ್ಕೆ ಅಡ್ಡಿಪಡಿಸುವುದರಿಂದ ನಿಮಿರುವಿಕೆಯು ಬಾಧಿತವಾಗಬಹುದು.

ಒಟ್ಟಿನಲ್ಲಿ ಅನಗತ್ಯವಾಗಿ ದೀರ್ಘಕಾಲ ಉರಿಯೂತ ನಿವಾರಕಗಳನ್ನು ಸೇವಿಸುವುದರಿಂದ ಹಲವು ಬಗೆಯ ಸಮಸ್ಯೆಗಳಿಗೆ ಕಾರಣವಾಗಬಹುದೆನ್ನುವುದು ಸ್ಪಷ್ಟ. ಹಾಗಾಗಿ ಸಣ್ಣ ಪುಟ್ಟ ನೋವುಗಳನ್ನು ಸಹಿಸಿಕೊಂಡಿರುವುದೇ ಮೇಲು!

  1. http://www.jurology.com/article/S0022-5347(10)05203-1/abstract
  2. http://www.medscape.com/viewarticle/738497
992 reads

ಆರೋಗ್ಯ ಸಂಪದದಲ್ಲಿ

ಆಯುರ್ವೇದ ಮತ್ತು ಗಿಡಮೂಲಿಕೆಗಳ ಉತ್ಪನ್ನಗಳು ಸುರಕ್ಷಿತವಾಗಿಲ್ಲ ಎನ್ನುವ ಕಾರಣಕ್ಕೆ ಐರೋಪ್ಯ ಸಂಘವು ಇದೇ ಮೇ ೧ರಿಂದ ಅವುಗಳ ಆಮದನ್ನು ನಿಷೇಧಿಸಿದೆ. ಈ ಬಗ್ಗೆ ಫೆ. 10ರ ಪ್ರಜಾವಾಣಿಯಲ್ಲಿ ಶ್ರೀ ನಾಗೇಶ್ ಹೆಗಡೆ ಬರೆದಿರುವ ವಿಚಾರ ಪ್ರಚೋದಕವಾದ ಲೇಖನ ಇಲ್ಲಿದೆ:
http://prajavani.net/Content/Feb102011/nagesh20110209226435.asp

913 reads

ಆರೋಗ್ಯ ಸಂಪದದಲ್ಲಿ

ಹೋಮಿಯೋಪತಿಯಲ್ಲಿ ಏನೂ ಇಲ್ಲ 10:23 ಅಭಿಯಾನದ ಬೆನ್ನಿಗೇ, ಅಮೆರಿಕಾದ ಹಿರಿಯ ವಿಚಾರವಾದಿ ಜೇಮ್ಸ್ ರಾಂಡಿ ಹೋಮಿಯೋಪತಿ ’ತಜ್ಞರಿಗೆ’ಹೊಸ ಸವಾಲೆಸೆದಿದ್ದಾರೆ: ಹೋಮಿಯೋಪತಿ ಔಷಧಗಳಲ್ಲಿ ಸಕ್ರಿಯವಾಗಿರುವ ಸಂಯುಕ್ತಗಳಿರುವುದು ಹಾಗೂ ಅವುಗಳಿಂದ ಯಾವುದೇ ಕಾಹಿಲೆಯನ್ನು ಗುಣಪಡಿಸಬಹುದೆನ್ನುವುದು ಇಕ್ಕಡೆಗೂ ಅರಿವಿಲ್ಲದ ಅಧ್ಯಯನಗಳಿಂದ ಶ್ರುತ ಪಟ್ಟರೆ ಹತ್ತು ಲಕ್ಷ ಡಾಲರ್ ನೀಡುವುದಾಗಿ ರಾಂಡಿ ಘೋಷಿಸಿದ್ದಾರೆ. ಎರ್ನ್ಸ್ಟ್ ಹಾಗೂ ಸೈಮನ್ ಸಿಂಗ್ ಅವರ ಹತ್ತು ಸಾವಿರ ಪೌಂಡ್ ಗಳ ಸವಾಲನ್ನೇ ಯಾರೂ ಸ್ವೀಕರಿಸಿರಲಿಲ್ಲ ಎಂದ ಮೇಲೆ ರಾಂಡಿಯ ಈ ಹೊಸ ಸವಾಲಿನ ಪರಿಣಾಮವನ್ನು ಕಾದು ನೋಡೋಣ.

http://www.randi.org/site/

938 reads

ಆರೋಗ್ಯ ಸಂಪದದಲ್ಲಿ

ಆಧುನಿಕ ವೈದ್ಯ ವಿಜ್ಞಾನಕ್ಕೆ ಬದಲಿಗಳೆಂದು ಹೇಳಿಕೊಳ್ಳುತ್ತಿರುವ ’ಚಿಕಿತ್ಸಾ ಪದ್ಧತಿಗಳ’ ಪೈಕಿ, ಪರಿಣಾಮಕಾರಿಯಾದ ಔಷಧದಂಶವೇ ಇಲ್ಲದ ಮಾತ್ರೆಗಳನ್ನು/ಅರ್ಕಗಳನ್ನು ನೀಡಲಾಗುವ ಪದ್ಧತಿಯೆಂದರೆ ಹೋಮಿಯೋಪತಿ.[ನೋಡಿ: ಹೋಮಿಯೋಪತಿಯಲ್ಲಿ ಹುರು(ಹರ)ಳಿಲ್ಲ] ಹೋಮಿಯೋಪತಿಯಲ್ಲಿ ನೀಡಲಾಗುವ ’ಔಷಧ’ಗಳ ಬಗ್ಗೆ ಸಾವಿರಗಟ್ಟಲೆಯಲ್ಲಿ ಅಧ್ಯಯನಗಳು ನಡೆದಿದ್ದರೂ, ಯಾವುದೇ ಕಾಹಿಲೆಯ ಚಿಕಿತ್ಸೆಯಲ್ಲಿ ಅವುಗಳಿಂದ ಕಿಂಚಿತ್ತಾದರೂ ಪ್ರಯೋಜನವಿದೆಯೆನ್ನುವುದು ಇದುವರೆಗೆ ದೃಢಗೊಂಡಿಲ್ಲ. ಅಂತಹ ಪ್ರಬಲವಾದ ಆಧಾರಗಳನ್ನು ಒದಗಿಸುವಂತೆ ಟ್ರಿಕ್ ಓರ್ ಟ್ರೀಟ್ ಮೆಂಟ್ ಪುಸ್ತಕದ ಲೇಖಕರಾದ ಎಡ್ಜಾರ್ಡ್ ಎರ್ನ್ಸ್ಟ್ ಮತ್ತು ಸೈಮನ್ ಸಿಂಗ್ ಅವರು ಘೋಷಿಸಿರುವ ಹತ್ತು ಸಾವಿರ ಪೌಂಡ್ ಗಳ ಸವಾಲನ್ನು ಸ್ವೀಕರಿಸಲು ಮೂರೂವರೆ ವರ್ಷಗಳಲ್ಲಿ ಯಾರೊಬ್ಬರೂ ಮುಂದೆ ಬಂದಿಲ್ಲ.[
ನೋಡಿ
] ಬರೇ ಬುರುಡೆಯಾಗಿರುವ ಹೋಮಿಯೋಪತಿ ಚಿಕಿತ್ಸೆಗಾಗಿ ಸರಕಾರಿ ಹಣವನ್ನು ಪೋಲು ಮಾಡಬಾರದೆಂದು ಇಂಗ್ಲೆಂಡಿನ ಸಂಸದರು ಮತ್ತು ಹಿರಿಯ ಹಾಗೂ ಕಿರಿಯ ವೈದ್ಯರುಗಳು ಒತ್ತಾಯಿಸಿರುವುದು ಈ ಹಿಂದೆ ವರದಿಯಾಗಿತ್ತು. [ನೋಡಿ: Stop funding homeopathy, say British MPs; British Medical Association: homeopathy is witchcraft] Read more »

1034 reads

ಆರೋಗ್ಯ ಸಂಪದದಲ್ಲಿ

ಮನುಷ್ಯರಲ್ಲಿ ಅತಿ ಹೆಚ್ಚಾಗಿ ಬಳಸಲ್ಪಡುವ ಔಷಧಗಳೆಂ‍ದರೆ ನೋವು ನಿವಾರಕಗಳು. ಹೆಚ್ಚಿನ ಸಂದರ್ಭಗಳಲ್ಲಿ, ವಿವಿಧ ಕಾರಣಗಳಿಂದ ಉಂಟಾಗಬಲ್ಲ ಉರಿಯೂತವೇ ನೋವನ್ನುಂಟು ಮಾಡುವುದರಿಂದ, ಉರಿಯೂತವನ್ನು ಶಮನಗೊಳಿಸುವ ಔಷಧಗಳನ್ನೇ ಹೆಚ್ಚಾಗಿ ನೋವು ನಿವಾರಕಗಳಾಗಿ ಬಳಸಲಾಗುತ್ತಿದೆ. ಆದರೆ ಉರಿಯೂತವಿಲ್ಲದೆ ಇತರ ಕಾರಣಗಳಿಂದ ನೋವುಂಟಾದಾಗಲೂ ಇವೇ ಔಷಧಗಳನ್ನು ಬಳಸುವುದು ತೀರಾ ಸಾಮಾನ್ಯವಾಗಿ ಬಿಟ್ಟಿದೆ. ನಮ್ಮ ದೇಶದಲ್ಲಂತೂ ಎಲ್ಲಾ ತರಹದ ನೋವು ನಿವಾರಕಗಳು ಹಾಗೂ ಉರಿಯೂತ ನಿರೋಧಕ ಔಷಧಗಳು ಯಾವ ನಿಯಂತ್ರಣವೂ ಇಲ್ಲದೆ, ಬೇಕಾಬಿಟ್ಟಿಯಾಗಿ ಎಲ್ಲೆಡೆ ಮಾರಲ್ಪಡುತ್ತವೆ. ಯಾವ ಔಷಧಗಳ ಅಗತ್ಯವೂ ಇಲ್ಲದ ಸಣ್ಣ ಪುಟ್ಟ ನೋವುಗಳಿಂದ ಹಿಡಿದು, ಉರಿಯೂತ ನಿರೋಧಕಗಳ ಬಳಕೆಗೆ ಯಾವ ಪಾತ್ರವೂ ಇಲ್ಲದ ಜ್ವರ ಇತ್ಯಾದಿ ಕಾಹಿಲೆಗಳವರೆಗೆ ಸಿಕ್ಕಸಿಕ್ಕಲ್ಲೆಲ್ಲ ಇವು ಯಥೇಷ್ಟವಾಗಿ ಬಳಕೆಯಾಗುತ್ತಿವೆ. ಹೊಟ್ಟೆ ಹುಣ್ಣಿನಿಂದ ಉಂಟಾದ ನೋವಿಗೆ ಹೊಟ್ಟೆ ಹುಣ್ಣನ್ನುಂಟು ಮಾಡಬಲ್ಲ ಹಾಗೂ ಅದರಲ್ಲಿ ರಕ್ತಸ್ರಾವವಾಗುವಂತೆ ಮಾಡಬಲ್ಲ ಉರಿಯೂತ ನಿರೋಧಕಗಳನ್ನೇ ಬರೆಯುವ ವೈದ್ಯರೂ, ಸ್ವಯಂ ಆಗಿ ಬಳಸುವ ರೋಗಿಗಳೂ ಅಪರೂಪವಲ್ಲ. ಯಾವುದೇ ಸಂದರ್ಭದಲ್ಲೂ ಒಂದಕ್ಕಿಂತ ಹೆಚ್ಚು ನೋವು ನಿವಾರಕಗಳನ್ನು ಸೇವಿಸುವ ಅಗತ್ಯವೇ ಇಲ್ಲದಿರುವಾಗ ಎರಡು ಯಾ ಹೆಚ್ಚು ಬಗೆಯ ನೋವು ನಿವಾರಕಗಳನ್ನೂ, ಉರಿಯೂತ ನಿರೋಧಕ ಔಷಧಗಳನ್ನೂ ಬೆರೆಸಿ ಬಳಸುವುದು ಇತ್ತೀಚಿನ ವರ್ಷಗಳಲ್ಲಿ ಅತಿ ಸಾಮಾನ್ಯವಾಗಿಬಿಟ್ಟಿದೆ, ಅಂತಹಾ ಔಷಧಗಳ ಸಾವಿರಾರು ವಿಧದ ’ಬೆರಕೆ ಮಾತ್ರೆಗಳು’ನಮ್ಮಲ್ಲಿ ಲಭ್ಯವಿವೆ. Read more »

974 reads

ಆರೋಗ್ಯ ಸಂಪದದಲ್ಲಿ

ಇತ್ತೀಚಿನ ವರ್ಷಗಳಲ್ಲಿ ಜಗತ್ತಿನ ಅತಿದೊಡ್ಡ ದಾನಿಯೆಂದು ಬಿಂಬಿಸಲ್ಪಡುತ್ತಿರುವ ಬಿಲ್ ಗೇಟ್ಸ್ ಮಹಾಶಯನ ಬಗ್ಗೆ ಈ ಹಿಂದೆಯೂ ಬರೆದಿದ್ದೆ. [ಇಲ್ಲಿದೆ] ಇಂದಿನ ಹಿಂದೂ ಪತ್ರಿಕೆಯ ವರದಿಯನ್ನು ನೋಡಿದ ಬಳಿಕ ಇನ್ನೊಮ್ಮೆ ಅವನ ಬಗ್ಗೆ ಬರೆಯಬೇಕಾಯಿತು.

ಬಿಲ್ ಗೇಟ್ಸ್ ದತ್ತಿನಿಧಿಯ ‘ನೆರವಿನಿಂದ’ ಬಹುರಾಷ್ಟ್ರೀಯ ದೈತ್ಯ ಕಂಪೆನಿಗಳು ಹಲವು ಹೊಸಬಗೆಯ ಲಸಿಕೆಗಳನ್ನು ತಯಾರಿಸಿ ಅಭಿವೃದ್ಧಿಶೀಲ ದೇಶಗಳ ಜನರ ಮೇಲೆ, ಅದರಲ್ಲೂ ಮಕ್ಕಳ ಮೇಲೆ, ಪ್ರಯೋಗಿಸುತ್ತಿರುವ ಬಗ್ಗೆ ಈಗಾಗಲೇ ಸಾಕಷ್ಟು ವಿವಾದಗಳೆದ್ದಿವೆ. ನಮ್ಮ ಆಂಧ್ರಪ್ರದೇಶ, ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ, ಚತ್ತೀಸಘಡ ಮುಂತಾದ ರಾಜ್ಯಗಳ ಹಿಂದುಳಿದ ಒಳಭಾಗಗಳಲ್ಲಿ, ಯಾರ ಗೊಡವೆಗೂ ಇಲ್ಲದೆ ಜೀವಿಸುತ್ತಿರುವ ಬಡಪಾಯಿ ಬುಡಕಟ್ಟು ಜನಾಂಗಗಳ ಮಕ್ಕಳನ್ನು ಲಸಿಕೆಗಳು ಹಾಗೂ ಔಷಧಗಳ ಪರೀಕ್ಷೆಗಳಿಗಾಗಿ ಬಳಸಿಕೊಳ್ಳಲಾಗುತ್ತಿರುವುದು ಹೊಸತೇನಲ್ಲ. ಗರ್ಭನಾಳದ ಕ್ಯಾನ್ಸರನ್ನು ತಡೆಗಟ್ಟುತ್ತದೆನ್ನಲಾದ ಲಸಿಕೆಯ ಪರೀಕ್ಷೆಗಳಲ್ಲಿ ಪ್ರಯೋಗಪಶುಗಳಾಗಿದ್ದ ಕೆಲವು ಮಕ್ಕಳು ಸಾವನ್ನಪ್ಪಿದ ಬಳಿಕ ಒತ್ತಡಕ್ಕೊಳಗಾಗಿ ಈ ಲಸಿಕೆಯ ಪ್ರಯೋಗಗಳನ್ನು ನಿಲ್ಲಿಸಲಾಗಿತ್ತು.[ನೋಡಿ 1,2,3,4] Read more »

563 reads

ಆರೋಗ್ಯ ಸಂಪದದಲ್ಲಿ

ನವೆಂಬರ್ 14 ವಿಶ್ವ ಮಧುಮೇಹ ದಿನ. ನಮ್ಮಲ್ಲಿ ಅಂದು ಮಕ್ಕಳ ದಿನಾಚರಣೆಯೂ ಹೌದು. ಈ ಸಂದರ್ಭದಲ್ಲಿ ಒಂದು ಸರಳ ಪ್ರತಿಜ್ಞೆಯನ್ನು ಮಾಡೋಣ ಬನ್ನಿ: ಇನ್ನು ಮುಂದೆ ಯಾವುದೇ ಮಕ್ಕಳಿಗೆ ಸಿಹಿತಿಂಡಿಗಳನ್ನಾಗಲೀ, ಪೇಯಗಳನ್ನಾಗಲೀ, ಚಾಕಲೇಟು, ಐಸ್ ಕ್ರೀಂ ಇತ್ಯಾದಿಗಳನ್ನಾಗಲೀ ನೀಡದಿರೋಣ; ಮಕ್ಕಳ ಹುಟ್ಟುಹಬ್ಬವನ್ನು ಸಿಹಿಯಿಲ್ಲದೆಯೇ ಆಚರಿಸೋಣ; ಮಕ್ಕಳಿಗೆ ನಮ್ಮ ಪ್ರೀತಿಯನ್ನು ತೋರ್ಪಡಿಸುವುದಕ್ಕೆ, ಯಾ ಅವರನ್ನು ಹುರಿದುಂಬಿಸುವುದಕ್ಕೆ ಚಾಕಲೇಟು, ಬಿಸ್ಕತ್ತು ಇತ್ಯಾದಿಗಳನ್ನು ನೀಡುವ ಬದಲು ಪುಸ್ತಕಗಳನ್ನು ನೀಡೋಣ. ಸಿಹಿಯಲ್ಲಿರುವುದೆಲ್ಲಾ ಸಕ್ಕರೆಯೇ, ಸಕ್ಕರೆಯ ಸೇವನೆ ಅತಿಯಾಗಿಯೇ ಮಧುಮೇಹ, ಬೊಜ್ಜು ಇತ್ಯಾದಿ ರೋಗಗಳು. ಮಕ್ಕಳಲ್ಲಿ ಸಕ್ಕರೆಯ ಬಳಕೆಯನ್ನು ನಿಯಂತ್ರಿಸಿ ಅವರ ಆರೋಗ್ಯವನ್ನು ರಕ್ಷಿಸೋಣ.

495 reads

ಆರೋಗ್ಯ ಸಂಪದದಲ್ಲಿ

ಮುಟ್ಟು ನಿಂತ ನಂತರದಲ್ಲಿ ಮಹಿಳೆಯರ ಶರೀರದಲ್ಲಿ ಹಲವು ತರದ ಬದಲಾವಣೆಗಳು ಉಂಟಾಗುತ್ತಿರುತ್ತವೆ. ಮೂಳೆ ಸವೆತ, ರಕ್ತದ ಏರೊತ್ತಡ, ಹೃದಯಾಘಾತ ಇತ್ಯಾದಿ ಇವುಗಳಲ್ಲಿ ಮುಖ್ಯವಾದುವುಗಳು. ಋತುಚಕ್ರದ ವೇಳೆ ಅಂಡಾಶಯದಿಂದ ಸ್ರವಿಸಲ್ಪಡುವ ಸ್ತ್ರೀ ಸಹಜ ಹಾರ್ಮೋನುಗಳು ಇಂತಹಾ ತೊಂದರೆಗಳುಂಟಾಗದಂತೆ ತಡೆಯುತ್ತವೆ, ಮುಟ್ಟು ನಿಂತಾಗ ಈ ಹಾರ್ಮೋನುಗಳ ಸ್ರಾವವು ಕ್ಷೀಣಿಸುವುದರಿಂದಾಗಿ ಈ ತೊಂದರೆಗಳು ಹೆಚ್ಚಲು ಕಾರಣವಾಗುತ್ತದೆ, ಆದ್ದರಿಂದ ಈ ಹಾರ್ಮೋನುಗಳನ್ನು ಮಾತ್ರೆಗಳ ರೂಪದಲ್ಲಿ ಬದಲಿಯಾಗಿ ನೀಡುವ ಮೂಲಕ ಈ ಎಲ್ಲಾ ತೊಂದರೆಗಳನ್ನೂ ತಡೆಯಲು ಸಾಧ್ಯವಿದೆ ಎಂದು ’ಶ್ರುತಪಡಿಸಿದ’ ಕೆಲವು ಅಧ್ಯಯನಗಳು ಸುಮಾರು ಎರಡು ದಶಕಗಳ ಹಿಂದೆ ಪ್ರಕಟಗೊಂಡವು. ಈ ಅಧ್ಯಯನಗಳ ಆಧಾರದಲ್ಲಿ ’ಬದಲಿ ಹಾರ್ಮೋನು ಚಿಕಿತ್ಸೆ’ ವ್ಯಾಪಕವಾಗಿ ಬಳಕೆಗೆ ಬಂತು, ದಿನಕ್ಕೆ ಹತ್ತರಿಂದ ಮೂವತ್ತು ರೂಪಾಯಿಗಳಷ್ಟು ವೆಚ್ಚದ ಹಾರ್ಮೋನುಗಳನ್ನು ಮುಟ್ಟು ನಿಂತ ಪ್ರತಿಯೋರ್ವ ಮಹಿಳೆಗೂ ಕೊಡುವ ಪರಿಪಾಠ ಆರಂಭವಾಯಿತು.

ನಂತರದ ದಿನಗಳಲ್ಲಿ ನಡೆಸಲಾದ ಸ್ವತಂತ್ರವಾದ, ದೊಡ್ಡ ಸಂಖ್ಯೆಯ ಮಹಿಳೆಯರನ್ನೊಳಗೊಂಡ ಅಧ್ಯಯನಗಳಲ್ಲಿ ಹಾರ್ಮೋನ್ ಬಳಕೆಯಿಂದ ಹಲವು ಗಂಭೀರ ಪರಿಣಾಮಗಳುಂಟಾಗಬಹುದೆನ್ನುವುದು ದೃಢಪಟ್ಟಿತು. ಅಮೆರಿಕಾದ ವಿಮೆನ್ಸ್ ಹೆಲ್ತ್ ಇನಿಷಿಯೇಟಿವ್ ಅಧ್ಯಯನದಲ್ಲಿ, ಹಾರ್ಮೋನ್ ತೆಗೆದುಕೊಳ್ಳುತ್ತಿದ್ದ 16608 ಮಹಿಳೆಯರಲ್ಲಿ ಸ್ತನದ ಕ್ಯಾನ್ಸರ್ ನಲ್ಲಿ ಶೇ. 26ರಷ್ಟು, ಮಿದುಳಿನ ಆಘಾತದಲ್ಲಿ ಶೇ. 46ರಷ್ಟು, ಹೃದಯಾಘಾತದಲ್ಲಿ ಶೇ. 29ರಷ್ಟು ಹೆಚ್ಚಳವಾಗುತ್ತದೆಯೆನ್ನುವುದು ಹಾಗೂ ರಕ್ತ ಹೆಪ್ಪುಗಟ್ಟುವ ಸಮಸ್ಯೆಯು ದುಪ್ಪಟ್ಟಾಗುತ್ತದೆಯೆನ್ನುವುದು ಕಂಡುಬಂತು. ಬ್ರಿಟನ್ನಿನ ದಿ ಮಿಲಿಯನ್ ವಿಮೆನ್ ಸ್ಟಡಿಯಲ್ಲಿಯೂ ಇಂತಹದೇ ಪರಿಣಾಮಗಳನ್ನು ಗುರುತಿಸಲಾಯಿತು.

ಆದರೂ ಸಾಕಷ್ಟು ವೈದ್ಯರು ಮುಟ್ಟು ನಿಂತ ಮಹಿಳೆಯರಿಗೆ ಈ ಹಾರ್ಮೋನುಗಳನ್ನು ನೀಡುವುದನ್ನು ಮುಂದುವರಿಸಿದರು, ಈಗಲೂ ಹಲವರು ಅದನ್ನು ತೆಗೆದುಕೊಳ್ಳುತ್ತಿದ್ದಾರೆ. Read more »

1382 reads
Syndicate content